ಭೂದಾನ ಪೈಸಾರಿಗೆ ತೆರಳುವ ರಸ್ತೆ ಕಾಮಗಾರಿಗೆ ಶಾಸಕ ಅಪ್ಪಚ್ಚು ರಂಜನ್ ಚಾಲನೆ

February 2, 2021

ಸುಂಟಿಕೊಪ್ಪ,ಫೆ.2: ಭೂದಾನ ಪೈಸಾರಿಗೆ ತೆರಳುವ ರೂ. 15 ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಭೂಮಿಪೂಜೆ ನೇರವೇರಿಸಿದರು.
ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂದಾನ ಪೈಸಾರಿಗೆ ತೆರಳುವ ರಸ್ತೆಯು ಸಂಪೂರ್ಣ ಹದಗೆಟ್ಟು ಇಕ್ಕಟ್ಟಿನಿಂದ ಕೂಡಿದೆ. ಶಾಸಕರ ಅನುದಾನದಡಿಯಲ್ಲಿ ರೂ. 15 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಕಾಂಕ್ರಿಟ್ ರಸ್ತೆಯನ್ನು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಅನುದಾನದಲ್ಲಿ ನಿರ್ಮಿಸಲು ಚಾಲನೆ ನೀಡಲಾಯಿತು.
ಭೂದಾನ ಪೈಸಾರಿಗೆ ತೆರಳುವ ಸಾರ್ವಜನಿಕ ರಸ್ತೆಯು ತೀವ್ರ ಇಕ್ಕಟಿನಿಂದ ಕೂಡಿದ್ದು ಇದನ್ನು ಮನಗಂಡ ರಸ್ತೆಯ ಪಕ್ಕದಲ್ಲಿರುವ ಟಾಟಾ ಕಾಫಿ ಸಂಸ್ಥೆಯವರಿಗೆ ಸೇರಿದ್ದ ಕಾಫಿ ತೋಟದ ಜಾಗವನ್ನು ತೆರವುಗೊಳಿಸಿ ಈ ಭಾಗದ ಸಾರ್ವಜನಿಕರ ಸೇವೆಗಾಗಿ ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ. ಟಾಟಾ ಕಾಫಿ ಸಂಸ್ಥೆಯವರ ಜನಸೇವಾ ಮನೋಭಾವನೆಯನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಶ್ಲಾಘೀಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧುಮತಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಹಾಗೂತಾಲೂಕು ಭೂನ್ಯಾಯಮಂಡಳಿ ಸದಸ್ಯರಾದ ಡಾ.ಶಶಿಕಾಂತರೈ, ಟಾಟಾ ಕಾಫಿ ಸಂಸ್ಥೆ ವ್ಯವಸ್ಥಾಪಕರಾದ ನಾಚಪ್ಪ, ಶಕ್ತಿ ಕೇಂದ್ರ ಅಧ್ಯಕ್ಷ ದಿನೇಶ್, ಭೂತ್ ಸಮಿತಿ ಅಧ್ಯಕ್ಷ ಅಜಿತ್, ಶಕ್ತಿ ಕೇಂದ್ರ ಮಾಜಿ ಅಧ್ಯಕ್ಷ ಜಯಂತ್, ಪ್ರಶಾಂತ್, ಬಿಜೆಪಿ ಅಲ್ಪಸಂಖ್ಯಾತರ ಅಧ್ಯಕ್ಷ ಖಾದರ್ ಹಾಗೂ ಉದ್ಯಮಿಗಳಾದ ರಾಮಚಂದ್ರಶೆಟ್ಟಿ ಮತ್ತಿತರರು ಹಾಜರಿದ್ದರು.

error: Content is protected !!