ಫೆ.11 ರಿಂದ 20 ರವರೆಗೆ ಗ್ರಂಥಾಲಯದ ಎರವಲು ಸೇವೆ ಸ್ಥಗಿತ

February 2, 2021

ಮಡಿಕೇರಿ ಫೆ.2 : ಜಿಲ್ಲಾ ಕೇಂದ್ರ ಗ್ರಂಥಾಲಯ ಮಡಿಕೇರಿಯಲ್ಲಿ 2020-21 ನೇ ಸಾಲಿನ ಪುಸ್ತಕಗಳ ವಾರ್ಷಿಕ ದಾಸ್ತಾನು ಪರಿಶೀಲನೆಗೆ ಫೆ . 11 ರಿಂದ 20 ರವರೆಗೆ ಗ್ರಂಥಾಲಯದ ಎರವಲು ಸೇವೆಯನ್ನು ಸ್ಥಗಿತಗೊಳಿಸಲಾಗುವುದು. ಹಾಗೂ ಎರವಲು ಪಡೆದಿರುವ ಓದುಗರು ಪುಸ್ತಕಗಳನ್ನು ಹಿಂತಿರುಗಿಸಲು ಈ ಮೂಲಕ ತಿಳಿಸಿದೆ.
ದಿನಪತ್ರಿಕೆ ವಿಭಾಗ ಮತ್ತು ಪರಾಮರ್ಶನ ವಿಭಾಗದಲ್ಲಿ ಎಂದಿನಂತೆ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಗ್ರಂಥಾಲಯದ ಸೇವೆಯು ಲಭ್ಯವಿರುತ್ತದೆ. ಆದರೆ ಭಾನುವಾರ ಹಾಗೂ ಇತರೇ ಸರ್ಕಾರಿ ರಜಾ ದಿನಗಳಂದು ಗ್ರಂಥಾಲಯದ ಯಾವುದೇ ಸೇವೆಯು ಲಭ್ಯವಿರುವುದಿಲ್ಲ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಅವರು ತಿಳಿಸಿದ್ದಾರೆ.

error: Content is protected !!