ಚೇಂಬರ್ ಆಫ್ ಕಾಮರ್ಸ್ ಮತ್ತು ಲಯನ್ಸ್ ಕ್ಲಬ್ ನಿಂದ ಮಡಿಕೇರಿಯಲ್ಲಿ ಸ್ವಚ್ಛತಾ ಶ್ರಮದಾನ

February 2, 2021

ಮಡಿಕೇರಿ ಫೆ.2 : ಚೇಂಬರ್ ಆಫ್ ಕಾಮರ್ಸ್ ಮತ್ತು ಮಡಿಕೇರಿ ಲಯನ್ಸ್ ಕ್ಲಬ್ ವತಿಯಿಂದ ನಗರದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ನಗರದ ಎವಿ ಶಾಲೆ ಬಳಿಯಿಂದ ಇಂದಿರಾಗಾಂಧಿ ವೃತ್ತದವರೆಗೆ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿದರು.
ಚೇಂಬರ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಲಯನ್ಸ್ ಸಂಸ್ಥೆಯ ಟ್ರಸ್ಟ್ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಜಿಲ್ಲಾ ಚೇಂಬರ್ ಸಂಘಟನಾ ಕಾರ್ಯದರ್ಶಿ ಮೋಂತಿ ಗಣೇಶ್, ಮಡಿಕೇರಿ ನಗರಾಧ್ಯಕ್ಷ ಎಂ.ಧನಂಜಯ, ಪ್ರಮುಖರಾದ ಬಿ.ಎಂ.ರಾಜೇಶ್, ಸಂತೋಷ್ ಅನ್ವೇಕರ್, ಅಜ್ಜೇಟಿರ ಲೋಕೇಶ್, ಸವಿತಾ ಅರುಣ್, ಗೋವಿಂದ, ಲಯನ್ಸ್ ಕ್ಲಬ್‍ನ ಅಧ್ಯಕ್ಷೆ ಅನಿತಾ ಸೋಮಣ್ಣ, ಕಾರ್ಯದರ್ಶಿ ಕನ್ನಂಡ ಕವಿತ, ಖಜಾಂಚಿ ಕಮಲಾ ಮುರುಗೇಶ್, ತೇಜ್‍ರಾಜ್ ಚೌದರಿ, ಗೀತಾ ಮಧುಕರ್, ಪಟ್ರಪಂಡ ಸೋಮಣ್ಣ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

error: Content is protected !!