ಫೆ.3 ಮತ್ತು 4 ರಂದು ತಂತ್ರಾಂಶ ಆಧಾರಿತ ಸೇವೆಗಳ ಅರಿವು ಮೂಡಿಸುವ ಕಾರ್ಯಕ್ರಮ

February 2, 2021

ಮಡಿಕೇರಿ ಫೆ. 2 : ಮಡಿಕೇರಿ ವಿಭಾಗ ವ್ಯಾಪ್ತಿಯ ಶಾಖೆಗಳಲ್ಲಿ ವಿದ್ಯುತ್ ಕ್ಷೇತ್ರ ಮಟ್ಟದಲ್ಲಿ ಗ್ರಾಹಕರಿಗೆ/ನಾಗರೀಕರಿಗೆ ವಿದ್ಯುತ್ ಸೇವೆಗಳಲ್ಲಿ ಆಗಿರುವ ಗಣನೀಯ ಬದಲಾವಣೆಗಳು, ತಂತ್ರಾಂಶ ಆಧಾರಿತ ಸೇವೆಗಳ ಅರಿವು ಮೂಡಿಸುವ ಕಾರ್ಯಕ್ರಮವು ಫೆಬ್ರವರಿ, 3 ರಂದು ಬೆಳಗ್ಗೆ 11 ಗಂಟೆಗೆ ಕುಶಾಲನಗರ, ಕೂಡಿಗೆ, ಫೆಬ್ರವರಿ, 4 ರಂದು ಬೆಳಗ್ಗೆ 11 ಗಂಟೆಗೆ ಸುಂಟಿಕೊಪ್ಪ, ಗೋಣಿಕೊಪ್ಪಲು ಮತ್ತು ವಿರಾಜಪೇಟೆ ಶಾಖೆಯ ಆವರಣದಲ್ಲಿ ನಡೆಯಲಿದೆ.
ಈ ಶಾಖಾ ವ್ಯಾಪ್ತಿಯ ಗ್ರಾಹಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

error: Content is protected !!