ದಿ. ಜೆ.ಪಿ.ನಾರಾಯಣ ಸ್ವಾಮಿ ಜನ್ಮದಿನಾಚರಣೆ : ಪ್ರತಿಷ್ಠಾನದಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

02/02/2021

ಕುಶಾಲನಗರ ಫೆ. 2 : ಈಡಿಗ ಸಮಾಜದ ಮುಖಂಡ, ಸಮಾಜ ಸೇವಕ ದಿ.ಜೆ.ಪಿ.ನಾರಾಯಣ ಸ್ವಾಮಿ ಅವರ 69ನೇ ಹುಟ್ಟುಹಬ್ಬ ಅಂಗವಾಗಿ ಕುಶಾಲನಗರದಲ್ಲಿ ಹಣ್ಣುಹಂಪಲು ವಿತರಣೆ ಕಾರ್ಯಕ್ರಮ ನಡೆಯಿತು.
ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ಕೊಡಗು ಜಿಲ್ಲಾ ಘಟಕದ ಪ್ರಮುಖರು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಧುಸೂದನ್, ಪ್ರತಿಷ್ಠಾನದ ಕೊಡಗು ಜಿಲ್ಲಾ ಘಟಕದ ಮುಖ್ಯ ಸಂಚಾಲಕ ಚಂದ್ರು, ಪ್ರಮುಖರಾದ ಸಂತೋಷ್, ಚಂದು, ಪ್ರಕಾಶ್, ಮನು, ಕುಮಾರ್ ಮತ್ತಿತರರು ಇದ್ದರು.