Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
9:01 PM Sunday 17-October 2021

ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಅಂತಿಮ ಸ್ಪರ್ಷ : ಸೇನೆಯ ಅಧೀನದಲ್ಲಿ ಸನ್ನಿ ಸೈಡ್ ಪ್ರದೇಶ

02/02/2021

ಮಡಿಕೇರಿ ಫೆ.2 : ದೇಶ ಕಂಡ ಅಪ್ರತಿಮ ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ನಿವಾಸ “ಸನ್ನಿಸೈಡ್” ಮ್ಯೂಸಿಯಂ ಆಗಿ ಪರಿವರ್ತನೆಗೊಂಡು ವಿಶೇಷ ಆಕರ್ಷಣೆಯನ್ನು ಪಡೆದುಕೊಂಡಿದೆ. ಇದೇ ಫೆ.6 ರಂದು ರಾಷ್ಟ್ರಪತಿಗಳಿಂದ ಉದ್ಘಾಟನೆಗೊಳ್ಳಲಿರುವ ಮ್ಯೂಸಿಯಂಗೆ ಭಾರತೀಯ ಸೇನೆ ಅಂತಿಮ ಸ್ಪರ್ಷವನ್ನು ನೀಡುತ್ತಿದೆ.
ಮ್ಯೂಸಿಯಂಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದ್ದು, ಭಾರತೀಯ ಸೇನೆಯ ಮೆದ್ರಾಸ್ ರೆಜಿಮೆಂಟ್ ಯೋಧರು ಸಂಪೂರ್ಣ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದು ಆಕರ್ಷಣೆಯನ್ನು ಹೆಚ್ಚಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಈಗಾಗಲೇ ಸನ್ನಿಸೈಡ್‍ನಲ್ಲಿರುವ ರಷ್ಯಾ ನಿರ್ಮಿತ ಭಾರತೀಯ ಸೇನೆಯ ಹಲವಾರು ಯುದ್ದಗಳಲ್ಲಿ ಪಾಲ್ಗೊಂಡು ನಿವೃತ್ತಿಯಾಗಿರುವ “ಹಿಮ್ಮತ್” ಹೆಸರಿನ ಟಿ.50 ಯುದ್ದ ಟ್ಯಾಂಕರ್ ಅನ್ನು ಸಜ್ಜುಗೊಳಿಸಲಾಗಿದ್ದು, “ಮಿಗ್ 20” ಯುದ್ದ ವಿಮಾನಕ್ಕೆ ಬಣ್ಣ ಬಳಿಯುವ ಕೆಲಸದಲ್ಲಿ ಸೇನಾ ಯೋಧರು ತೊಡಗಿಕೊಂಡಿದ್ದಾರೆ.
ಸನ್ನಿಸೈಡ್ ಆವರಣದಲ್ಲಿ ಈಗಾಗಲೇ ಪೆಂಡಾಲ್ ಅಳವಡಿಸಲಾಗಿದ್ದು, ರಾಷ್ಟ್ರಪತಿಗಳು ಮತ್ತು ರಕ್ಷಣಾ ಪಡೆಗಳ ಉನ್ನತ ಅಧಿಕಾರಿಗಳ ಆಗಮನಕ್ಕೆ ಅಪ್ರತಿಮ ಸೇನಾನಿಯ ತವರು ಮನೆ ಸಜ್ಜಾಗುತ್ತಿದೆ. ಎಲ್ಲೆಡೆ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಸೇನಾ ಯೋಧರು ಅಮರ್ ಜವಾನ್ ಯುದ್ಧ ಸ್ಮಾರಕದ ಬಳಿ ರಾಷ್ಟ್ರಪತಿಗಳ ಗೌರವ ಸಮರ್ಪಣೆಯ ಪೂರ್ವಾಭ್ಯಾಸ ನಡೆಸುತ್ತಿದೆ.
::: ಸರ್ವ ಸಿದ್ಧತೆ :::
ಇನ್ನು ರಾಷ್ಟ್ರಪತಿಗಳು ಮತ್ತು ರಕ್ಷಣಾ ಪಡೆಗಳ ಉನ್ನತ ಸೇನಾಧಿಕಾರಿಗಳು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನ, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ, ಗಾಲ್ಫ್ ಗ್ರೌಂಡ್ ಮತ್ತು ಭಾಗಮಂಡಲದಲ್ಲೂ ಹೆಲಿಪ್ಯಾಡ್‍ಗಳನ್ನು ನಿರ್ಮಿಸಲಾಗುತ್ತಿದೆ. ಜನರಲ್ ತಿಮ್ಮಯ್ಯ ಮ್ಯೂಸಿಯಂ ಅನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳು, ನಗರದ ಮುಖ್ಯ ರಸ್ತೆಗಳನ್ನು ಮರು ಡಾಮರೀಕರಣ ಮಾಡಲಾಗುತ್ತಿದ್ದು, ರಸ್ತೆಗಳಲ್ಲಿ ಈ ಹಿಂದೆ ಅಳವಡಿಸಲಾಗಿದ್ದ ಎಲ್ಲ ಹಂಪ್‍ಗಳನ್ನು ತೆರವು ಮಾಡಲಾಗಿದೆ. ರಸ್ತೆಗಳ ಉದ್ದಕ್ಕೂ ಬೀದಿ ದೀಪಗಳ ಅಳವಡಿಕೆ ಕಾರ್ಯ ಮಾಡಲಾಗುತ್ತಿದ್ದು ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗ, ನಗರಸಭೆ ವತಿಯಿಂದ ವಿವಿಧ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.
::: ಶನಿವಾರ ಅಂಗಡಿಗಳು ಬಂದ್ :::
ರಾಷ್ಟ್ರಪತಿಗಳ ಭೇಟಿ ಹಿನ್ನಲೆಯಲ್ಲಿ ಮಡಿಕೇರಿಯ ಫೀ.ಮಾ. ಕಾರ್ಯಪ್ಪ ಕಾಲೇಜಿನಿಂದ ಸಾಗುವ ಎಲ್.ಐ.ಸಿ ರಸ್ತೆ, ರಾಜಾಸೀಟ್, ಕೆ.ಎಸ್.ಆರ್.ಟಿ.ಸಿ ಬಸ್ ಡಿಪ್ಪೋ, ಫೀ.ಮಾ. ಕಾರ್ಯಪ್ಪ ವೃತ್ತ ಮಾರ್ಗದ ರಸ್ತೆ ಬದಿಯ ಎಲ್ಲಾ ಅಂಗಡಿ ಮುಂಗಟ್ಟುಗಳು ಸೇರಿದಂತೆ ಮೆಡಿಕಲ್ ಶಾಪ್‍ಗಳನ್ನು ಕೂಡ ಬಂದೋಬಸ್ತ್ ದೃಷಿಯಿಂದ ಶನಿವಾರ ಮುಚ್ಚುವಂತೆ ನಗರಸಭೆ ಸೂಚನೆ ನೀಡಿದೆ. ಈ ಮಾರ್ಗದಲ್ಲಿ ರಕ್ಷಣಾ ಇಲಾಖೆ ಮತ್ತು ಪೊಲೀಸ್ ಇಲಾಖೆ ಪೂರ್ವಭಾವಿಯಾಗಿ ಬೆಂಗಾವಲು ರಕ್ಷಣೆಯ ಪೂರ್ವಾಭ್ಯಾಸವನ್ನೂ ನಡೆಸಲಿದ್ದು, ಇದೇ ಮಾರ್ಗದಲ್ಲಿ ರಾಷ್ಟ್ರಪತಿಗಳು ಮ್ಯೂಸಿಯಂಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.
::: ಬಿಗಿ ಭದ್ರತೆ :::
ರಾಷ್ಟ್ರಪತಿಗಳ ಆಗಮನದ ಹಿನ್ನೆಲೆಯಲ್ಲಿ ರಾಜ್ಯ ಕಾನೂನು-ಸುವ್ಯವಸ್ಥೆ ಹಾಗೂ ಗುಪ್ತವಾರ್ತೆ(ಹೆಚ್ಚುವರಿ) ವಿಭಾಗದ ಎಡಿಜಿಪಿ ಪ್ರತಾಪ್ ರೆಡ್ಡಿ ಮಡಿಕೇರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಪೊಲೀಸ್ ಇಲಾಖೆಯ ಮೂಲಕ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳು, ರಸ್ತೆ ಮಾರ್ಗ ಬದಲಾವಣೆ, ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಕುರಿತು ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದ್ದಾರೆ. ಬಳಿಕ ಭಾಗಮಂಡಲ ಮತ್ತು ತಲಕಾವೇರಿಗೂ ತೆರಳಿ ಅಲ್ಲಿನ ವ್ಯವಸ್ಥೆಗಳ ಬಗ್ಗೆಯೂ ಪರಿಶೀಲನೆ ನಡೆಸಿದ್ದಾರೆ.