ವಿರಾಜಪೇಟೆ ಪೊಲೀಸರ ಕಾರ್ಯಾಚರಣೆ : ಪೋಸ್ಕೊ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

February 3, 2021

ಮಡಿಕೇರಿ ಫೆ.3 : ಪೋಸ್ಕೊ ಪ್ರಕರಣದಲ್ಲಿ ಸೆರೆಯಾಗಿ ನಂತರ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿರಾಜಪೇಟೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಎ.ಆರ್.ಅಮೃತ್ ಬಂಧಿತ ಆರೋಪಿಯಾಗಿದ್ದು, ಇದೇ ಜ.12 ರಂದು ಪೋಸ್ಕೊ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸುವ ಉದ್ದೇಶದಿಂದ ವೈದ್ಯಕೀಯ ಪರೀಕ್ಷೆ ನಡೆಸಿ ಕರೆ ತರುವಾಗ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ತಳ್ಳಿಹಾಕಿ ಸ್ಥಳದಿಂದ ಅಮೃತ್ ಪರಾರಿಯಾಗಿದ್ದ.
ತೀವ್ರ ಶೋಧ ಕಾರ್ಯ ನಡೆಸಿದ ವಿರಾಜಪೇಟೆ ನಗರ ಠಾಣೆಯ ಅಪರಾಧ ವಿಭಾಗದ ಉಪನಿರೀಕ್ಷಕ ಹೆಚ್.ಎಸ್.ಬೋಜಪ್ಪ ಹಾಗೂ ಸಿಬ್ಬಂದಿಗಳು ಇದೀಗ ಬೆಂಗಳೂರಿನ ಲಗ್ಗರೆ ಎಂಬಲ್ಲಿ ಅರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಅವರ ನಿರ್ದೇಶನದಲ್ಲಿ ವೃತ್ತ ನಿರೀಕ್ಷಕ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಹೆಚ್.ಎಸ್.ಬೋಜಪ್ಪ. ಸಿಬ್ಬಂದಿಗಳಾದ ಗಿರೀಶ್, ಮುಸ್ತಫ, ಸತೀಶ್ ಹಾಗೂ ಮುನೀರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!