Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
10:17 PM Sunday 17-October 2021

ಸ್ವರಚಿತ ಕವಿತಾ ವಾಚನ ಸ್ಪರ್ಧೆ : ಸಾಹಿತ್ಯ ಮಾನವೀಯ ಮೌಲ್ಯಗಳಿಗೆ ಆಧಾರ ಸ್ತಂಭವಾಗಲಿ : ಡಾ.ಬಿ.ಸಿ.ನವೀನ್ ಕುಮಾರ್ ಕರೆ

03/02/2021

ಮಡಿಕೇರಿ ಫೆ.3 : ಸಾಹಿತ್ಯ ಮಾನವೀಯ ಮೌಲ್ಯಗಳಿಗೆ ಆಧಾರ ಸ್ತಂಭವಾಗಿ ಬೆಳೆಯುವುದರೊಂದಿಗೆ ಸಮಾಜದ ನೂನ್ಯತೆಯ ಬಗ್ಗೆ ಬೆಳಕು ಚೆಲ್ಲುವಂತಹ ಕೆಲಸ ಸಾಹಿತ್ಯದಿಂದ ಆಗಬೇಕು ಎಂದು ಬಿಜೆಪಿ ರೈತ ಮೋರ್ಚದ ರಾಜ್ಯ ಕಾರ್ಯದರ್ಶಿ ಹಾಗೂ ಮಕ್ಕಳ ತಜ್ಞರಾದ ಡಾ. ಬಿ.ಸಿ. ನವೀನ್ ಕುಮಾರ್ ಸಲಹೆ ನೀಡಿದ್ದಾರೆ.

ನಗರದ ಭಾರತೀಯ ವಿದ್ಯಾಭವನದಲ್ಲಿ ಬುಧವಾರ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಕಾವ್ಯ ಭೂಮಿಕೆ, ಆಯೋದ್ಯೆಯಲ್ಲಿ ರಾಮಮಂದಿರ ಹೃದಯದಲ್ಲಿ ರಾಮಚಂದಿರ ಎನ್ನುವ ವಿಚಾರದ ಕುರಿತು ನಡೆದ ಜಿಲ್ಲಾ ಮಟ್ಟದ ಸ್ವರಚಿತ ಕವಿತಾ ವಾಚನ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಹಿತ್ಯಕ್ಕೆ ಒಂದು ಕಾಲದಲ್ಲಿ ಅಕ್ಷರಗಳಿರಲಿಲ್ಲ. ಜನಪದದ ಮೂಲಕವೇ ಸಾಹಿತ್ಯ ಗಮನ ಸೆಳೆದಿತ್ತು. ಯಾವುದೇ ವ್ಯಕ್ತಿಗೆ ಸಂವೇದನಾ ಶೀಲತೆ ಮುಖ್ಯವಾಗಿದ್ದು, ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವ ಮೂಲಕ ಜೀವನ ಪರಿಪೂರ್ಣವಾಗಿಸಬೇಕಿದೆ. ಸಾಮಾನ್ಯ ಜನರಿಗೂ ಸಾಹಿತ್ಯ ಅರ್ಥಮಾಡಿಸಿ ಸಮಾಜ ತಿದ್ದುವ ಕೆಲಸವನ್ನು ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರಿಯುವವರು ಮಾಡಬೇಕಿದೆ ಎಂದರು.

ಸಾಮಾಜಕ್ಕೆ ಒಂದು ಉತ್ತಮ ಸಂದೇಶಗಳನ್ನೆ ಸಾಹಿತ್ಯ ನೀಡುವುದೇ ಆದರೆ, ಸಾಹಿತ್ಯಕ್ಕೆ ಉತ್ತಮ ಬೆಲೆ ಸಿಗುತ್ತದೆÉ. ಕೆಲವು ಸಾಹಿತ್ಯ ಕಂಗಟ್ಟಾಗಿದ್ದು, ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯೂ ಇರುತ್ತದೆ. ಆದ್ದರಿಂದ ಸಾಹಿತ್ಯ ಸುಂದರವಾಗಿ, ಸಮಂಜಸವಾಗಿ, ಸಮಾಜಮುಖಿಯಾಗಿದ್ದಲ್ಲಿ ಮಾತ್ರ ಸಾಹಿತ್ಯ ಪ್ರತಿಯೊಬ್ಬರ ಮನದಲ್ಲಿ ಉಳಿಯಲು ಸಾಧ್ಯ ಎಂದು ಅವರು ನುಡಿದರು.

“ರಾಮಚರಿತ ಮಾನಸ” ಗೋಸ್ವಾಮಿ ತುಳಸಿ ದಾಸರು ಬರೆದಂತಹ ಗ್ರಂಥ ಉತ್ತರ ಭಾರತ ಮತ್ತು ಮಧ್ಯ ಭಾರತದಲ್ಲಿ ತುಂಬ ಪ್ರಭಲವಾಗಿ ಜನರಲ್ಲಿ ಪರಿಣಾಮ ಬೀರಿತ್ತು. ಇದಕ್ಕೆ ಮುಖ್ಯ ಕಾರಣ ಗ್ರಂಥದಲ್ಲಿದ್ದ ರಾಮನ ಜೀವನವನ್ನು ಭಾವನಾತ್ಮಕವಾಗಿ ಒಬ್ಬ ವ್ಯಕ್ತಿ ಹೇಗೆ ಆದರ್ಶವಾಗಿಸಬಹುದೆನ್ನುವ ಉತ್ತಮ ಸಂದೇಶ. ಹೀಗೆ ಸಾಹಿತ್ಯ ಪ್ರಪಂಚವನ್ನು ಅರಿತುಕೊಳ್ಳುವ ಬಹು ದೊಡ್ಡ ಸಾಧನವಾಗಿದೆ. ಜೊತೆಗೆ ಸಾಹಿತ್ಯಕ್ಕೂ ಸಂಸ್ಕøತಿಗೂ ನೇರ ಸಂಬಂಧವಿದೆ. ಸಾಹಿತ್ಯದ ಮೂಲಕವೂ ನಮ್ಮ ಸಂಸ್ಕøತಿ ಉಳಿಸುವ ಕಾರ್ಯವೂ ಮುಂದುವರೆಯಬೇಕಿದೆ ಎಂದು ಸಲಹೆ ನೀಡಿದರು.

ಇಂದಿನ ಯುವಕರು ಹೆಚ್ಚು ಸಾಮಾಜಿಕ ಜಾಲ ತಾಣದ ದಾಸರಾಗಿದ್ದಾರೆ. ಆದರೆ, ಎಲ್ಲವನ್ನು ಸಾಮಾಜಿಕ ಜಾಲ ತಾಣದಿಂದ ತಿಳಿದುಕೊಳ್ಳಲು ಸಾಧ್ಯವಿಲ್ಲ. ಈ ನಡುವೆ ಪುಸ್ತಕ ಓದುವ ಅಭಿರುಚಿಯನ್ನೇ ಯುವಕರು ಕಳೆದುಕೊಳ್ಳುವಂತೆ ಆಗಿದೆ. ಪುಸ್ತಕ ಓದುವ ಸಂತೋಷ ಮತ್ತು ಆತ್ಮ ಸಂತೃಪ್ತಿ ಸಾಮಾಜಿಕ ಜಾಲತಾಣದಲ್ಲಿ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಓದುವ ಸಂಸ್ಕøತಿಯನ್ನು ಯುವಕರಲ್ಲಿ ಬೆಳೆಸಬೇಕಿದೆ. ಮಕ್ಕಳು ಟಿವಿ. ಸೋಷಿಯಲ್ ಮೀಡಿಯಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಬೆಳವಣಿಗೆ ಹೆಚ್ಚು ಆತಂಕಕಾರಿ ಎಂದು ಎಚ್ಚರಿಸಿದರು.

ರಾಮನ ವಿಚಾರದಾರೆಗಳನ್ನು ಪ್ರತಿಯೊಬ್ಬರು ಸ್ವೀಕಾರ ಮಾಡಬೇಕು, ಸೌಹರ್ದತೆಯೊಂದಿಗೆ ರಾಮನನ್ನು ಆರಾಧಿಸಬೇಕು, ದೇಶದ ಸುಭದ್ರತೆಗೆ ಸಹಕಾರ ನೀಡಬೇಕಿದೆ, ಈ ನಿಟ್ಟಿನಲ್ಲಿ ರಾಮನ ವಿಷಯದಲ್ಲಿ ನಡೆಯುತ್ತಿರುವ ಕವನ, ಕಾವ್ಯ ರಚನೆ ಹೆಚ್ಚು ಗಮನ ಸೆಳೆಯುವಂತಾಗಲಿ ಎಂದು ಡಾ. ನವೀನ್ ಕುಮಾರ್ ಅವರು ಹಾರೈಸಿದರು.

ಪರಿಷದ್ ಜಿಲ್ಲಾಧ್ಯಕ್ಷ ಕಿಗ್ಗಾಲು ಗಿರೀಶ್ ಮಾತನಾಡಿ ಸಾಹಿತ್ಯ, ಕವನಗಳು ಹೆಚ್ಚು ಬದ್ಧತೆಯಿಂದ ರಚಿಸಬೇಕು, ಭಾವನೆ ಎಂಬ ಪ್ರತಿಮೆಯನ್ನು ಸಾಹಿತ್ಯದ ಮೂಲಕ ರಚಿಸಬೇಕು ಎಂದು ಸಲಹೆ ನೀಡಿದರು.

“ಕವಿಗೋಷ್ಠಿ ಮೂರು ಹಂತಗಳಲ್ಲಿ ನಡೆಯಲಿದ್ದು, ಮೊದಲ ಸುತ್ತಿನಲ್ಲಿ ಜಿಲ್ಲಾ ಮಟ್ಟದ ಕವಿತಾ ರಚನೆ ಹಾಗೂ ವಾಚನ ಸ್ಪರ್ಧೆ, ಎರಡನೆಯ ಸುತ್ತು ಮಂಗಳೂರು ವಿಭಾಗ ಮಟ್ಟದಲ್ಲಿ ಹಾಗೂ ಅಂತಿಮ ಸುತ್ತು ರಾಜ್ಯ ಮಟ್ಟದಲ್ಲಿ ನಡೆಯಲಿದೆ. ಅಂತಿಮ ಸುತ್ತಿನಲ್ಲಿ ಆಯ್ಕೆಯಾದ ಐವತ್ತು ಕವನಗಳು ಸಂಕಲನದ ರೂಪದಲ್ಲಿ ಪ್ರಕಟಗೊಳ್ಳಲಿವೆ. ಮಾತ್ರವಲ್ಲದೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಏಳು ಸಮಾಧಾನಕರ ಬಹುಮಾನಗಳನ್ನು ಸಹ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು

ಸಮಾರಂಭದಲ್ಲಿ ಸಾಹಿತಿಗಳಾದ ಕಸ್ತೂರಿ ಗೋವಿಂದಮ್ಮಯ್ಯ, ಕೋರನ ಸುನಿಲ್, ಬಾರಿಯಂಡ ಜೋಯಪ್ಪ, ಗೌರಮ್ಮ, ಕೃಪಾ ದೇವರಾಜ್, ಭಾರತಿ ರಮೇಶ್, ತುಳಸಿ ಮೋಹನ್, ಬೈತಡ್ಕ ಜಾನಕ್ಕಿ, ಪರಿಷದ್ ಕಾರ್ಯದರ್ಶಿ ಬಬ್ಬೀರ ಸರಸ್ವತಿ, ಖಜಾಂಚಿ ಕಡ್ಲೇರ ಆಶಾ ಧರ್ಮಪಾಲ್ ಇದ್ದರು. ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 23 ಕವಿಗಳು ತಮ್ಮ ಸ್ವ ರಚಿತ ಕವನಗಳನ್ನು ವಾಚಿಸಿ, ಗಮನ ಸೆಳೆದರು.