ತಮಿಳು ಬಾಂಧವರ ಕಾವೇರಿ ಕ್ರೀಡಾಕೂಟ : ಶ್ರಮಿಕರ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗುವಂತಾಗಬೇಕು : ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಅಭಿಮತ

February 4, 2021

ಮಡಿಕೇರಿ ಫೆ.4 : ಜಿಲ್ಲೆಯ ವಿವಿಧ ಕಡೆಗಳಲ್ಲಿ ನೆಲೆಸಿರುವ ತಮಿಳು ಜನಾಂಗದವರನ್ನು ಒಗ್ಗೂಡಿಸುವ ಕೆಲಸಕ್ಕೆ ತಮಿಳು ಯುವ ಒಕ್ಕೂಟ ಮುಂದಾಗಿರುವುದು ಮೆಚ್ಚತಕ್ಕದ್ದು, ಜತೆಗೆ ಜನಾಂಗದ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗುವಂತಾಗಬೇಕೆಂದು ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಅಭಿಮತ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ತಮಿಳು ಯುವ ಒಕ್ಕೂಟದ ವತಿಯಿಂದ ಸಮುದಾಯ ಬಾಂಧವರಿಗೆ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ವಿವಿಧ ಬಗೆಯ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಬಹುಮಾನ ವಿತರಿಸಿ ಮಾತನಾಡಿದ ಅವರು, ಎಲ್ಲ ಜನಾಂಗದವರು ತಮ್ಮ ತಮ್ಮ ಸಮುದಾಯದ ಏಳಿಗೆಗಾಗಿ ಸಂಘಟನಾತ್ಮಕವಾಗಿ ಶ್ರಮಿಸುತ್ತಿವೆ, ಅಂತೆಯೇ ಜಿಲ್ಲೆಯ ಮೂಲೆ ಮೂಲೆಗೂ ಚದುರಿ ಹೋಗಿರುವ ತಮಿಳು ಜನಾಂಗವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ತಮಿಳು ಜನಾಂಗದವರು ವಿದ್ಯಾಭ್ಯಾಸ ವಂಚಿತರಾಗಿದ್ದು, ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತ ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ಬಡತನದ ಮಧ್ಯೆ ಸಮುದಾಯದ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಅಂತಹ ಮಕ್ಕಳನ್ನು ತಮಿಳು ಯುವ ಒಕ್ಕೂಟ ಗುರುತಿಸಿ ಅವರನ್ನು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿರುವುದು ಸಂತೋಷದ ವಿಷಯ ಮುಂದೆ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಒಕ್ಕೂಟ ಮಾಡಬೇಕಾಗಿದೆ ಆ ಮೂಲಕ ಮಾದರಿ ಸಂಘಟನೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ರವಿ, ತಮಿಳು ಯುವ ಒಕ್ಕೂಟ ಈಗಾಗಲೇ ಹಲವು ಸಮಾಜಮುಖಿ ಕಾರ್ಯಕ್ರಮಗಳ ಜತೆಗೆ ಸಮುದಾಯ ಬಾಂಧವರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುವ ಮುಖಾಂತರ ಸಮುದಾಯ ಬಾಂಧವರ ಪರವಾಗಿ ನಿಂತ್ತಿದ್ದು, ಮುಂದೆ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆಸಿದೆ. ಜಿಲ್ಲೆಯಲ್ಲಿರುವ ತಮಿಳು ಜನಾಂಗದವರು ನಮ್ಮೊಂದಿಗೆ ಕೈಜೋಡಿಸುವ ಮೂಲಕ ನಮ್ಮ ಪ್ರಯತ್ನಕ್ಕೆ ಬಲ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್, ಸಂಚಾಲಕರಾದ ಸುರೇಶ್ ಬಿಳಿಗೇರಿ, ಸಿದ್ದಾಪುರ ಗ್ರಾ ಪಂ ಸದಸ್ಯ ಪಳನಿ ಸ್ವಾಮಿ, ಪ್ರಮುಖರಾದ ರಾಜ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕ್ರೀಡಾಕೂಟದ ಅಂಗವಾಗಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗಿಯಾದ 14 ತಂಡಗಳ ಪೈಕಿ ಫೈನಲ್ ಪ್ರವೇಶಿಸಿದ ಕೌಟಿಲ್ಯ ಬ್ರಿಗೇಡ್ ತಂಡ ಚಾಂಪಿಯನ್ ಪಟ್ಟವನ್ನು ತನ್ನದಾಗಸಿಕೊಂಡರೆ. ಎಫ್.ಸಿ.ಸಿ ಘಟ್ಟದಳ ತಂಡ ರನ್ನರ್ ಆಫ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಫೈನಲ್ ನಲ್ಲಿ ಟಾಸ್ ಗೆದ್ದ ಕೌಟಿಲ್ಯ ಬ್ರಿಗೇಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಎಫ್.ಸಿ.ಸಿ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತ್ತು.
ಮೊದಲು ಬ್ಯಾಟಿಂಗ್ ಮಾಡಿದ . ಎಫ್.ಸಿ.ಸಿ ಘಟ್ಟದಳ ತಂಡ ನಿಗದಿತ ಐದು ಓವರ್ ಗಳಲ್ಲಿ 25 ರನ್ನುಗಳನ್ನು ಕಲೆಹಾಕಿತ್ತು. 26 ರನ್ನುಗಳ ಗುರಿಯನ್ನು ಬೆನ್ನಟ್ಟಿದ ಕೌಟಿಲ್ಯ ತಂಡ ನಿಗದಿತ ಐದು ಓವರ್ ಗಳಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಶಿಪ್ ಪಟ್ಟ ಅಲಂಕರಿಸಿತ್ತು.

ಭಾನುವಾರ ಬೆಳಗ್ಗೆ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಮಂಜುಳಾ.ಬಿ ಪ್ರಥಮ ಸ್ಥಾನ, ನಾಚಪ್ಪ ದ್ವಿತೀಯ, ಮಂಜುಳಾ. ಇ ತೃತೀಯ ಹಾಗೂ ದೈವಾನೆ ನಾಲ್ಕನೇ ಸ್ಥಾನ ಪಡೆದರೆ. ಡ್ರಾಯಿಂಗ್ ಸ್ಪರ್ಧೆಯಲ್ಲಿ ಕಾರ್ತಿಕ್ ಪ್ರಥಮ, ದೀಕ್ಷಿತ್ ದ್ವಿತೀಯ ಕಿರಣ್ ತೃತೀಯ, ಪ್ರತೀಕ್ಷಾ ನಾಲ್ಕನೇ, ಹಾಗೂ ಡಿನಿತ್ ಐದನೇ ಸ್ಥಾನ ಪಡೆದುಕೊಂಡರು.
ಬಕೆಟ್ ಗೆ ಬಾಲ್ ಹಾಕುವ ಸ್ಪರ್ಧೆಯಲ್ಲಿ ಹರ್ಷಿತಾ ಪ್ರಥಮ, ಅಂಜಲಿ ದ್ವಿತೀಯ ಹಾಗೂ ಸಂಧ್ಯಾ ತೃತೀಯ ಸ್ಥಾನವನ್ನು
ಶಾಟ್ ಫುಟ್ ನಲ್ಲಿ ಜಯಕುಮಾರ್ (ಪ್ರ), ಮೋಹನ್ ರಾಜ್ (ದ್ವಿ), ಮುತ್ತು (ತೃ) ಸ್ಥಾನ ಪಡೆದುಕೊಂಡರು.
ಕಪ್ಪೆ ಓಟ ಬಾಲಕಿಯರ ವಿಭಾಗದಲ್ಲಿ ಸಂಧ್ಯಾ (ಪ್ರ), ದೀಪಾಲಿ (ದ್ವಿ), ಪ್ರತೀಕ್ಷಾ (ತೃ)
ಬಾಲಕರ ವಿಭಾಗದಲ್ಲಿ ಮುಖೇಶ್ (ಪ್ರ), ರೋಷನ್ (ದ್ವಿ), ಪುನೀತ್ (ತೃ)
ಮಕ್ಕಳ ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಶಿವಕಾರ್ತಿಕ್ ಪ್ರಥಮ, ಗ್ರೀಷ್ಮ ದ್ವಿತೀಯ ಹಾಗೂ ಹರ್ಷಾಲಿ ತೃತೀಯ ಸ್ಥಾನ ಗಳಿಸಿದರು.
100 ಮೀಟರ್ ಓಟ ಬಾಲಕರ ವಿಭಾಗದಲ್ಲಿ ಚೇತನ್ ಪ್ರಥಮ, ರೋಷನ್ ದ್ವಿತೀಯ ಹಾಗೂ ಮುಖೇಶ್ ತೃತೀಯ ಸ್ಥಾನ
ಮಹಿಳೆಯರ ವಿಭಾಗದಲ್ಲಿ ವಿಜೀತ ಪ್ರಥಮ, ವಿನೀತ ದ್ವಿತೀಯ, ಹರ್ಷಿತಾ ತೃತೀಯ
ಪುರುಷರ ವಿಭಾಗದಲ್ಲಿ ಚಂದ್ರು ಪ್ರಥಮ, ಸತೀಶ್ ದ್ವಿತೀಯ ಹಾಗೂ ಸುರೇಶ್ ತೃತೀಯ ಸ್ಥಾನ ಪಡೆದುಕೊಂಡರು.
ಅಡ್ಮಿನ್ ಬಳಗದ ಸದಸ್ಯರ ವಿಭಾಗದಲ್ಲಿ ಸುರೇಶ್ ಪ್ರಥಮ, ವಿಘ್ನೇಶ್ ದ್ವಿತೀಯ, ಮೋಹನ್ ರಾಜ್ ತೃತೀಯ ಸ್ಥಾನ ಗಳಿಸಿದರು.
ನಿಂಬೆ ಚಮಚ ಓಟದಲ್ಲಿ ವಿನೀತ ಪ್ರಥಮ, ಸೆಲ್ವಿ ದ್ವಿತೀಯ, ಅಕ್ಷಿತ ತೃತೀಯ ಸ್ಥಾನ ಪಡೆದರೆ. ವಿಷಾದ ಚೆಂಡು ಸ್ಪರ್ಧೆ ಮಹಿಳೆಯರ ವಿಭಾಗದಲ್ಲಿ ಶೀಲಾ ಪ್ರಥಮ, ಪ್ರಭಾ ದ್ವಿತೀಯ ಹಾಗೂ ಅನುಪ್ರಿಯ ತೃತೀಯ ಸ್ಥಾನ ಗಳಿಸಿದರೆ.
60 ವರ್ಷ ಮೇಲ್ಪಟ್ ಮಹಿಳೆಯರ ವಿಭಾಗದಲ್ಲಿ ದೈವಾನೇ ಪ್ರಥಮ, ಚಂದ್ರಾವತಿ ದ್ವಿತೀಯ ಹಾಗೂ ಸವಿತಾ ತೃತೀಯ ಸ್ಥಾನ ಪಡೆದುಕೊಂಡರು. ಇದಲ್ಲದೆ ಮೈದಾನದಲ್ಲಿ ನಡೆದ ವಿವಿಧ ಬಗೆಯ ಕ್ರೀಡಾಕೂಟದಲ್ಲಿ ಸಮುದಾಯ ಬಾಂಧವರು ಪಾಲ್ಗೊಂಡು ಸಂಭ್ರಮಿಸಿದರು.

error: Content is protected !!