ರುಚಿಕರವಾದ ಎಗ್ ಫ್ರೈ ಮಾಡುವ ವಿಧಾನ

February 4, 2021

ಬೇಕಾಗುವ ಸಾಮಾಗ್ರಿಗಳು : ಈರುಳ್ಳಿ 3-4, ಮೊಟ್ಟೆ 6, ಹುಣಸೆ ಹಣ್ಣಿನ ರಸ 2 ಚಮಚ, ಖಾರದ ಪುಡಿ ಅರ್ಧ ಚಮಚ, ಅರಿಶಿಣ ಪುಡಿ ರುಚಿಗೆ ತಕ್ಕ ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು(ಅಲಂಕರಿಸಲು), 2 ಚಮಚ ಎಣ್ಣೆ.

ತಯಾರಿಸುವ ವಿಧಾನ: ಮೊಟ್ಟೆಯನ್ನು ಬೇಯಿಸಿ, ಅದರ ಸಿಪ್ಪೆ ಸುಲಿದು ಇಡಿ. ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ, ತವಾಕ್ಕೆ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಈಗ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
ನಂತರ ಹುಣಸೆ ಹಣ್ಣಿನ ರಸ ಹಾಕಿ ಖಾರದ ಪುಡಿ, ಅರಿಶಿಣ ಪುಡಿ, ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ ಮತ್ತೆ 3-4 ನಿಮಿಷ ಫ್ರೈ ಮಾಡಿ. ಈಗ ಬೇಯಿಸಿದ ಮೊಟ್ಟೆಯನ್ನು ಸಮ ಅರ್ಧ ಭಾಗವಾಗಿ ಕತ್ತರಿಸಿ, ತವಾದಲ್ಲಿ ಹಾಕಿ, ಫ್ರೈ ಮಾಡಿದ ಈರುಳ್ಳಿ ಸೌಟ್ ನಲ್ಲಿ ತೆಗೆದು ಮೊಟ್ಟೆಯ ಮೇಲೆ ಹಾಕಿ ಮತ್ತೆ 10 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಎಗ್ ಫ್ರೈ ರೆಡಿ.

error: Content is protected !!