ಶಿಡಿಗಳಲೇ ಮಠದಲ್ಲಿ ಗದ್ದುಗೆ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ

February 4, 2021

ಮಡಿಕೇರಿ ಫೆ. 4 : ಶನಿವಾರಸಂತೆಯ ಶಿಡಿಗಳಲೇ ಮಠದ ಆವರಣದಲ್ಲಿ ಗದ್ದುಗೆ ಜೀರ್ಣೋದ್ಧಾರ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿತು.
ಶ್ರೀಮಠದ ಹಿರಿಯ ಸ್ವಾಮೀಜಿ ಬಸವರಾಜ ಗದ್ದುಗೆಯನ್ನು ರೂ. 15 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲು ಉದ್ದೇಶಿಸಿದ್ದು, ಕೊಡ್ಲಿಪೇಟೆ ಕಲ್ಲುಮಠಾಧೀಶ ಮಹಾಂತಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶ ಸದಾಶಿವಸ್ವಾಮೀಜಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಶಿಡಿಗಳಲೇ ಮಠಾಧೀಶ ಇಮ್ಮಡಿ ಶಿವಲಿಂಗ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಮಠದ ಹೋರಾಟ ಸಮಿತಿ ಅಧ್ಯಕ್ಷ ಎಸ್.ಕೆ.ವೀರಪ್ಪ, ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಪ್ರಮುಖರುಗಳಾದ ಕೆ.ಬಿ.ಹಾಲಪ್ಪ, ಸೋಮಪ್ಪ, ನಂಜಪ್ಪ, ಹಾಗೂ ಮುಂತಾದವರು ಉಪಸ್ಥಿತರಿದ್ದರು.

error: Content is protected !!