“ರಾಷ್ಟ್ರೀಯ ಯುವ ಸ್ವಯಂಸೇವಕರ” ನೇಮಕಾತಿಗಾಗಿ ಯುವಕ, ಯುವತಿಯರಿಂದ ಅರ್ಜಿ ಆಹ್ವಾನ

February 4, 2021

ಮಡಿಕೇರಿ ಫೆ. 4 : ಭಾರತ ಸರ್ಕಾರದ ಯುವನಜ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯವು ಯುವಕ, ಯುವತಿಯರಿಗಾಗಿ “ರಾಷ್ಟ್ರೀಯ ಯುವ ಸ್ವಯಂ ಸೇವಕರು” ಯೋಜನೆಯನ್ನು ಆರಂಭಿಸಿದ್ದು, 13,206 ಯುವ ಜನರನ್ನು “ರಾಷ್ಟ್ರೀಯ ಯುವ ಸ್ವಯಂ ಸೇವಕರುಗಳನ್ನಾಗಿ” ಪೂರ್ಣಪ್ರಮಾಣದಲ್ಲಿ ಎರಡು ವರ್ಷಗಳ ಅವಧಿಗೆ ನಿಯೋಜಿಸಿಕೊಳ್ಳಲಾಗುತ್ತಿದೆ.
ಆಯ್ಕೆಯಾದವರಿಗೆ ವಿಷೇಷ ತರಬೇತಿ ಹಾಗೂ ಗೌರವಧನವನ್ನು ನೀಡಲಾಗುವುದು. ಜಿಲ್ಲೆಯ 5 ತಾಲ್ಲೂಕುಗಳಿಂದ 10 ಜನ ಹಾಗೂ ಕಚೇರಿಯ ಕಂಪ್ಯೂಟರ್‍ನಲ್ಲಿ ಕಾರ್ಯನಿರ್ವಹಿಸಲು 2 ಜನ ಸೇರಿದಂತೆ ಒಟ್ಟು 12 ಜನ “ರಾಷ್ಟ್ರೀಯ ಯುವ ಸ್ವಯಂ ಸೇವಕರನ್ನಾಗಿ ನೇಮಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಿಬಂಧನೆಗಳು : 1.4.2020ಕ್ಕೆ ಕನಿಷ್ಟ 18 ವರ್ಷದಿಂದ ಗರಿಷ್ಟ 29 ವರ್ಷದ ವಯೋಮಾನದವರಾಗಿರಬೇಕು, ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು(ಹೆಚ್ಚಿನ ವಿದ್ರ್ಯಾತೆಯವರಿಗೆ ಆದ್ಯತೆ ನೀಡಲಾಗುವುದು), ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಎನ್‍ಸಿಸಿ ಯಲ್ಲಿ ಪಾಲ್ಗೊಂಡಿರುವವರಿಗೆ ಆದ್ಯತೆ ಇದೆ. ಕಂಪ್ಯೂಟರ್ ಜ್ಞಾನ ಹೊಂದಿದವರಿಗೆ ವಿಶೇಷ ಆದ್ಯತೆ ನೀಡಲಾಗುವುದು, ಪ.ಜಾತಿ/ಪಂ ಹಾಗೂ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗುವುದು.
ಆಸಕ್ತರು ಜಿಲ್ಲಾ ವ್ಯಾಪ್ತಿಯ ಯುವಕ/ಯುವತಿಯರು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಯುವಜನ ಅಧಿಕಾರಿ, ನೆಹರು ಯುವ ಕೇಂದ್ರ ಯಶು ನಿಲಯ, ಬ್ಲಾಕ್ :08, ಕಾವೇರಿ ಲೇಜೌಟ್, ಮಡಿಕೇರಿ-571201 ಇವರಿಂದ ಕಾರ್ಯಾಲಯದ ಕೆಲಸದ ವೇಳೆಯಲ್ಲಿ ಪಡೆದು ಫೆಬ್ರವರಿ 20ರ ಸಂಜೆ 5 ಗಂಟೆಯ ಒಳಗಾಗಿ ಅರ್ಜಿ ಸಲ್ಲಿಸಲುವಂತೆ ಜಿಲ್ಲಾ ಯುವಜನ ಅಧಿಕಾರಿ ಎಸ್. ಸಿದ್ದರಾಮಪ್ಪ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 08272-225470 ಸಂಪರ್ಕಿಸನಹುದಾಗಿದೆ.

error: Content is protected !!