ಹುಳುಕಡ್ಡಿ ನಿವಾರಣೆಗೆ ಸುಲಭವಾದ ಮನೆಮದ್ದು

February 4, 2021

ಹುಳಕಡ್ಡಿ ತ್ರೈಕೊಫೆೈಲಟೊನ್ ಮೈಕ್ರೊಸ್ಪೊರಮ್ ಮತ್ತು ಎಪಿಡರ್ಮೊಪೈಟಾನ್ ಎಂಬ ರೋಗಾಣುಗಳಿಂದ ಹರಡುವ ರೋಗ. ಬೆಳ್ಳುಳಿಗೆ ಅಜೊಯೆನೆ ಎಂಬ ಫಂಗಲ್ , ಬ್ಯಾಕ್ಟೀರಿಯ , ವೈರಸ್‌ ನಿರೋಧಕ ಅಂಶಗಳಿದ್ದು ಬೆಳ್ಳುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಸೋಂಕು ಉಂಟಾದ ಜಾಗಕ್ಕೆ ಪಟ್ಟು ಕಟ್ಟ ಬೇಕು ರಾತ್ರಿ ಪೂರಾ ಹಾಗೆಯೇ ಬಿಟ್ಟು ತೊಳೆಯಬೇಕು, ಹೇಗೆ ಮುಂದುವರಿಸಿದರೆ ಹುಳುಕಡ್ಡಿ ಸಂಪೂರ್ಣ ವಾಸಿಯಾಗುತ್ತದೆ. ಲೋಳೆ ರಸವನ್ನು ಅರಿಶಿನದೊಂದಿಗೆ ಮಿಶ್ರಣ ಮಾಡಿ ಹಚ್ಚುವುದರಿಂದ ಹುಳುಕಡ್ಡಿ ನಿವಾರಣೆಯಾಗುತ್ತದೆ.

ಮೂಲಂಗಿ, ಮೊಸರು ಹಾಗು ನಿಂಬೆ ರಸವನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ಹುಳುಕಡ್ಡಿ ನಿವಾರಣೆಯಾಗುತ್ತದೆ. ನೆತ್ತಿಯಲ್ಲಿ ಉಂಟಾಗುವ ಹುಳುಕಡ್ಡಿ ಯನ್ನು ಪರಿಹಾರ ಮಾಡಲು ತೆಂಗಿನ ಎಣ್ಣೆಯನ್ನು ಬಳಸಲಾಗುತ್ತದೆ. ಬೆಳಗುಣಿಕೆ ಸೊಪ್ಪು, ಕಾಚಿಸೊಪ್ಪು ಎಲೆಗಳ ರಸವನ್ನು ಹುಳಕಡ್ಡಿ ನವೆಯನ್ನು ನಿವಾರಣೆ ಮಾಡಲು ಬಳಸಲಾಗುತ್ತದೆ.

ಸೇಬಿನ ರಸವನ್ನು ವಿನೆಗರ್ ನೊಂದಿಗೆ ಮಿಶ್ರಣ ಮಾಡಿ 3 -4 ಬಾರಿ ದಿನವೂ ಹಚ್ಚಿದರೆ ಹುಳುಕಡ್ಡಿ ಸಂಪೂರ್ಣ ವಾಸಿಯಾಗುತ್ತದೆ.ಮೆಹಂದಿ ಎಲೆಗಳನ್ನು ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ ಹಚ್ಚುವುದರಿಂದ ಹುಳುಕಡ್ಡಿ ನಿವಾರಣೆಯಾಗುತ್ತದೆ. ತುಳಸಿ ಎಲೆಗಳನ್ನು ಚೆನ್ನಾಗಿ ಜಜ್ಜಿ ಅರೆದು ಹುಳು ಕಡ್ಡಿ ಮೇಲೆ ಹಚ್ಚಿ ಒಂದು ದಿನ ಬಿಟ್ಟು ತೊಳೆಯಬೇಕು ಇದರಿಂದ ಹುಳುಕಡ್ಡಿ ನಿವಾರಣೆಯಾಗುತ್ತದೆ.

ಮೂರು ಹನಿ ಜೊಜೊಬಾ ತೈಲ ವನ್ನು ಮೂರು ಹನಿ ಲ್ಯಾವೆಂಡರ್ ತೈಲ ದೊಂದಿಗೆ ಮಿಶ್ರಣ ಮಾಡಿ ಹಚ್ಚುವುದರಿಂದ ಹುಳುಕಡ್ಡಿ ಸಂಪೂರ್ಣ ವಾಸಿಯಾಗುತ್ತದೆ.ಕಜ್ಜಿ ಮತ್ತು ಸೋರಿಯಾಸಿಸ್ನಲ್ಲಿ ಉಪಯೋಗಿಸುತ್ತಾರೆ.ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಲೇಪನ ಮಾಡಿ ಹಚ್ಚಬಹುದು.ಸಾಸಿವೆಯನ್ನು ನೀರಿನಲ್ಲಿ ನೆನೆಹಾಕಿ ನಂತರ ರುಬ್ಬಿ ಹುಳುಕಡ್ಡಿಯ ಮೇಲೆ ಪಟ್ಟು ಕಟ್ಟ ಬೇಕು. ಮನಿಬಲ್ಲಿ ಎಂಬ ಮರದ ಹಾಲಿನಿಂದ ಹುಳುಕಡ್ಡಿಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು.

error: Content is protected !!