ಹೊದ್ದೂರು ಶ್ರೀಶಾಸ್ತ-ಈಶ್ವರ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ : ಫೆ.12 ರಿಂದ ಆರಂಭ

February 4, 2021

ಮಡಿಕೇರಿ ಫೆ.4 : ಹೊದ್ದೂರು ಗ್ರಾಮದ ಶ್ರೀಶಾಸ್ತ-ಈಶ್ವರ ದೇವಾಲಯದಲ್ಲಿ ಫೆ.12 ರಿಂದ 18ರ ವರೆಗೆ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿಯ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಳು ದಿನಗಳ ಕಾಲ ನಡೆಯಲಿರುವ ವಿವಿಧ ಪೂಜಾ ವಿಧಿವಿಧಾನಗಳ ಕುರಿತು ಮಾಹಿತಿ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಅಶೀರ್ವಾದೊಂದಿಗೆ ಕೇರಳದ ಪಯ್ಯನ್ನೂರ್ ಜ್ಯೋತಿಷಿರು ಮಾಧವ ಪೊದುವಾಳ್, ದ.ಕ. ಸುಬ್ರಮಣ್ಯದ ಮಹೇಶ್ ಮುನಿಯಂಗಳ ಹಾಗೂ ಬ್ರಹ್ಮಶ್ರೀ ತಳಿಪರಂಬ್ ಪುದ್‍ಸೇರಿಲಾ ಶಂಕರನ್ ನಂಬೋದರಿ ತಂತ್ರಿಗಳ ನೇತೃತ್ವದಲ್ಲಿ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರುಗಲಿದೆ ಎಂದರು.
ಫೆ. 12 ರಂದು ಬೆಳಿಗ್ಗೆ 11 ಗಂಟೆಗೆ ಆಚಾರ್ಯ ವರಣ, ರಾತ್ರಿ 7 ಗಂಟೆಗೆ ಧಾನ್ಯಗಲ ಬಿತ್ತನೆ, 8 ಗಂಟೆಗೆ ದೇವಸ್ಥಾನ ಶುದ್ಧೀಕರಣ, 8.30ಕ್ಕೆ ರಾಕ್ಷೋಘ್ನ ಹೋಮ, 9 ಗಂಟೆಗೆ ವಾಸ್ತು ಹೋಮ, 10 ಗಂಟೆಗೆ ಪ್ರಸಾದ ಪೂಜೆ, 10.30ಕ್ಕೆ ವಾಸ್ತು, ಶಾಂತಿ ಹೋಮ, ಶಾಂತಿ ಕಲಶಾಭೀಷೇಕ, ವಾಸ್ತು ಪುಣ್ಯಾಹವನ ಹಾಗೂ ರಾತ್ರಿ 11 ಗಂಟೆಗೆ ಬಾಲಾಲಯದಿಂದ ನೂತನ ಗರ್ಭಗುಡಿಗೆ ದೇವರನ್ನು ವರ್ಗಾಯಿಸಿ ಮಹಾಪೂಜೆ ನಡೆಸಲಾಗುವುದೆಂದರು.
ಫೆ. 13 ರಂದು ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ, 8 ಗಂಟೆಗೆ ಧಾನ್ಯಗಳ ಬಿತ್ತನೆ, 8.30ಕ್ಕೆ ಉಷಾ ಪೂಜೆ (ಆದ್ಯತಾ ಪೂಜೆ), 9 ಗಂಟೆಗೆ ಬಿಂಬ ಶುದ್ಧಿ ಕಲಶ ಪೂಜೆ, 10 ಗಂಟೆಗೆ ಪ್ರಾಯಶ್ಚಿತ್ತ ಪರಿಹಾರ ಪೂಜೆ, 11 ಗಂಟೆಗೆ ಕಲಶಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಕಲಶ ಮಂಟಪ ಶುದ್ಧಿಕರಣ ನಡೆಯಲಿದ್ದು, ಸಂಜೆ 6.30ಕ್ಕೆ ದೀಪಾಲಂಕಾರ, 7 ಗಂಟೆಗೆ ಮಹಾಸುದರ್ಶನ ಹೋಮ, 8 ಗಂಟೆಗೆ ದುರ್ಗಾಪೂಝೆ, 8.30ಕ್ಕೆ ಧಾನ್ಯಗಳ ಬಿತ್ತನೆ, 9 ಗಂಟೆಗೆ ರಾತ್ರಿ ಪೂಜೆ ಜರುಗಲಿದೆ.
ಫೆ. 14 ರಂದು ಬೆಳಿಗ್ಗೆ 6.30ಕ್ಕೆ ಗಣಪತಿ ಹೋಮ, 7.30ಕ್ಕೆ ಧಾನ್ಯಗಳ ಬಿತ್ತನೆ, 8 ಗಂಟೆಗೆ ಉಷಾ ಪೂಜೆ, 9 ಗಂಟೆಗೆ ತತ್ವ ಕಲಶಪೂಜೆ, 9.30ಕ್ಕೆ ಅನುಜ್ಞಾ ಕಲಶ ಪೂಜೆ, 10 ಗಂಟೆಗೆ ತತ್ವ ಕಲಶಾಭೀಷೇಕ, 11 ಗಂಟೆಗೆ ಮಹಾ ಪೂಜೆ ನಡೆಯಲಿದೆ ಎಂದರು.
ಸಂಜೆ 6.30ಕ್ಕೆ ದೀಪಾಲಂಕಾರ, 7 ಗಂಟೆಗೆ ದುರ್ಗಾಪೂಜೆ, 7.30ಕ್ಕೆ ಧಾನ್ಯ ಪೂಜೆ, 9 ಗಂಟೆಗೆ ಕಲಾಧಿವಾಸ ಹೋಮ, 9.30ಕ್ಕೆ ಮಹಾಪೂಜೆ ನಡೆಯಲಿದೆ.
ಫೆ. 15 ರಂದು ಬೆಳಿಗ್ಗೆ 6.30ರಿಂದ ಗಣಪತಿ ಹೋಮ, ಧಾನ್ಯಗಳ ಬಿತ್ತನೆ, ಉಷಾ ಪೂಜೆ, ಅನುಜ್ಞಾ ಕಲಶಾಭಿಷೇಕ, ಕಲಶ ಮಂಟಪಶುದ್ದಿ ತತ್ವ ಕಲಶಾಭಿಷೇಕದ ನಂತರ 11.30ಕ್ಕೆ ಮಹಾ ಪೂಜೆ ಜರುಗಲಿದ್ದು, ಸಂಜೆ 5 ಯಿಂದ ಅನುಜ್ಞಾ ಬಲಿ, ಪ್ರಾರ್ಥನೆ, ದೀಪಾರಾಧನೆ, ಧಾನ್ಯ ಪೂಜೆ, ದುರ್ಗಾಪೂಜೆ, ಅದಿವಾಸ ನಡೆಯಲಿದ್ದು, ರಾತ್ರಿ 9 ಗಂಟೆಗೆ ಮಹಾ ಪೂಜೆ ಜರುಗಲಿದೆ.
ಫೆ. 16 ರಂದು ಬೆಳಿಗ್ಗೆ 6.30ರಿಂದ ಗಣಪತಿ ಹೋಮ, ಧಾನ್ಯ ಪೂಜೆ, 7.30ಕ್ಕೆ ಸಂಹಾರ ತತ್ವ ಕಲಶ ಪೂಜೆ, ಸಂಹಾತ ತತ್ವ ಹೋಮ, 9 ಗಂಟೆಗೆ ಪ್ರತಿಷ್ಠಾ ಕಲಶ ಪೂಜೆ, 9.30ಕ್ಕೆ ಶಯ್ಯ ಪೂಜೆ, 10 ಗಂಟೆಗೆ ಚೈತನ್ಯ ವೃದ್ಧಿ ಹೋಮ, 10.30ಕ್ಕೆ ಪ್ರತಿಷ್ಠಾ ಹೋಮ, 11 ಗಂಟೆಗೆ ಸಂಹಾರ ತತ್ವ ಕಲಶಾಭಿಷೇಕ ಪೂಜೆ ನಡೆಯಲಿದ್ದು, 11.30ಕ್ಕೆ ಧಾನ್ಯ ಸಂಕೋಚ ಪೂಜೆ, 12 ಗಂಟೆಗೆ ಜೀವಕಲಶ ಪೂಜೆ, 12.30ಕ್ಕೆ ಬಿಂಬೋದ್ಧಾರ ಕ್ರೀಯಾ ನಡೆಯಲಿದೆ.
ಸಂಜೆ 6.30ಕ್ಕೆ ದೇವಸ್ಥಾನ ಶುದ್ಧೀಕರಣ ನಡೆಯಲಿದ್ದು, ರಾತ್ರಿ 7ಯಿಂದ ಧ್ಯಾನಾಧಿವಾಸ ಪೂಜೆ ನಂತರ ಮಹಾಪೂಜೆ ಜರುಗಲಿದೆ.
ಫೆ.17 ರಂದು ಐತಿಹಾನಿಸ ಕ್ಷಣವಾಗಿದ್ದು, ಬೆಳಿಗ್ಗೆ 6.30 ರಿಂದ ಗಣಪತಿ ಹೋಮ, ಅಧಿವಾಸ ಉಣರ್ತಿ ಪೂಜೆ, ಪ್ರಸಾದ ಪ್ರತಿಷ್ಠೆ, ಪಾಣಿಪೀಠ ಪ್ರತಿಷ್ಠಾಪನೆ, ಮುಹೂರ್ತ ದಕ್ಷಿಣಾ ಜರುಗಲಿದೆ. 8.25ರ ಅಶ್ವಿನಿ 2ನೇ ಪಾದ ಮೀನ ರಾಶಿ 10.5 ರೊಳಗೆ ಸುಮೂಹೂರ್ತದಲ್ಲಿ ಶ್ರೀ ಶಾಸ್ತ-ಈಶ್ವರ ದೇವರ ಪ್ರತಿಷ್ಟೆ ನಡೆಯಲಿದೆ.
ಇದೇ ದಿನ ಇತಿಹಾಸ ಪವಾಡ ದೈವ ಶಕ್ತಿ, ಶ್ರೀ ಶಾಸ್ತ ಈಶ್ವರ ದೈವ ಲೋಕ ಕಲ್ಯಾಣಕ್ಕಾಗಿ ಅರ್ಪಣೆಗೊಳ್ಳಲಿದೆ ಎಂದರು.
ಬೆಳಿಗ್ಗೆ 10.30 ರಿಂದ ಪ್ರತಿಷ್ಠಾ ಬಲಿ, 10.45ಕ್ಕೆ ಮುಗುಳಿ ಸ್ಥಾಪನೆ, 11 ಗಂಟೆಗೆ ಪ್ರತಿಷ್ಠಾ ದಕ್ಷಿಣೆ, 11.15ಕ್ಕೆ ಬ್ರಹ್ಮಕಲಶ ಪೂಜೆ, 12 ಗಂಟೆಗೆ ನಿತ್ಯ ನೈಮಿತ್ತಿಕ ನಿಶ್ಚಯ ಪೂಜೆ ಜರುಗಲಿದೆ.
ಸಂಜೆ 5 ಗಂಟೆಗೆ ಪರಿಕಲಶ ಪೂಜೆ, 6.30ಕ್ಕೆ ದೀಪಾಲಂಕಾರ, 7 ಗಂಟೆಗೆ ಬಲಿಕಲ್ಲಿ ಶುದ್ಧೀಕರಣ, 7.30ಕ್ಕೆ ಬಲಿಪೀಠಾಧಿವಾಸ ಪೂಜೆ ಹಾಗೂ 9.30ಕ್ಕೆ ಮಹಾಪೂಜೆ ನಡೆಯಲಿದೆ.
ಫೆ. 18 ರಂದು ಬೆಳಿಗ್ಗೆ 6.30ಕ್ಕೆ ಗಣಪತಿ ಹೋಮ, 7.30ಕ್ಕೆ ಉಷಾ ಪೂಜೆ, 8 ಗಂಟೆಗೆ ಪರಿವಾರ ಕಲಶ ಪೂಜೆ, 8.30ಕ್ಕೆ ಪರಿವಾರ ಪ್ರತಿಷ್ಠೆ, 10 ಗಂಟೆಗೆ ಬ್ರಹ್ಮಕಲಶಾಭಿಷೇಕ, 10.30ಕ್ಕೆ ಪರಿವಾರ ಬಲಿ, 11 ಗಂಟೆಗೆ ಮಂತ್ರಾಕ್ಷತೆ ಜರುಗಲಿದೆ. ಸಂಜೆ 5 ಗಂಟೆಗೆ ಶಾಸ್ತ-ಈಶ್ವರ ದೇವರ ಉತ್ಸವ ಬಲಿ ನಂತರ ಸಂತ್ರೋಕ್ಷಣೆಯೊಂದಿಗೆ ವಿವಿಧ ಪೂಜಾ ಕೈಂಕರ್ಯಗಳು ಸಂಪನ್ನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಾಬ ಸುಬ್ರಮಣಿ ಮನವಿ ಮಾಡಿದರು. ಹೆಚ್ಚಿನ ಮಾಹಿತಿಗೆ 9845009302, 9845571290, 9686545969, 9880295564 ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ತಕ್ಕರಾದ ನೆರವಂಡ ನಂಜಪ್ಪ, ದೇವಾಲಯದ ಸಮತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ, ಸದಸ್ಯರಾದ ಚೌರಿರ ರಮೇಶ್, ಅಚ್ಚಪಂಡ ಮಂಜು ಮಾಚಯ್ಯ ಹಾಗೂ ಮೇಕಂಡ ಸುನೀಲ್ ಮಾದಪ್ಪ ಉಪಸ್ಥಿತರಿದ್ದರು.

error: Content is protected !!