ಕಾವೇರಿ ಪ್ರತಿಮೆ ತೆರವುಗೊಳಿಸದಂತೆ ಕೊಡಗು ಯುವ ಸೇನೆ ಒತ್ತಾಯ

February 4, 2021

ಮಡಿಕೇರಿ ಫೆ.4 : ಕುಶಾಲನಗರದ ಹೆಬ್ಬಾಗಿಲಿನಲ್ಲಿರುವ ಕಾವೇರಿ ಪ್ರತಿಮೆಯನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದೆಂದು ಕೊಡಗು ಯುವ ಸೇನೆ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಯುವ ಸೇನೆಯ ಪ್ರಮುಖರಾದ ಕುಲದೀಪ್ ಪೂಣಚ್ಚ, ಮಾಚೆಟ್ಟಿರ ಸಚಿನ್ ಮಂದಣ್ಣ, ಹರಪಳ್ಳಿ ಅಶ್ವತ್ಥ್ ಹಾಗೂ ಜಯಣ್ಣ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಾವೇರಿ ಪ್ರತಿಮೆಯಿಂದ ಯಾರಿಗೂ ಯಾವುದೇ ಅಡ್ಡಿ, ಆತಂಕಗಳಿಲ್ಲ. ಆದರೂ ವಕೀಲರೊಬ್ಬರು ಪ್ರತಿಮೆ ತೆರವುಗೊಳಿಸಲು ಪ್ರಯತ್ನಿಸಿರುವ ಬಗ್ಗೆ ಮಾಹಿತಿ ದೊರೆತ್ತಿದ್ದು, ಇದನ್ನು ಖಂಡಿಸುವುದಾಗಿ ಹೇಳಿದ್ದಾರೆ.
ಕಾವೇರಿಯ ತವರು ಜಿಲ್ಲೆ ಕೊಡಗಿನ ಗಡಿಯಲ್ಲಿ ಕಾವೇರಿ ಮಾತೆಯ ಪ್ರತಿಮೆ ಇರುವುದು ಹೆಗ್ಗಳಿಕೆಯಾಗಿದೆ ಎಂದು ಅವರುಗಳು ಅಭಿಪ್ರಾಯಪಟ್ಟಿದ್ದಾರೆ.

error: Content is protected !!