ಮಡಿಕೇರಿಯಲ್ಲಿ ಕಲ್ಲುಗಣಿ ಸುರಕ್ಷಿತ ಮತ್ತು ಅನಧಿಕೃತ ಗಣಿಗಾರಿಕೆ ತಡೆ ಕಾರ್ಯಾಗಾರ

04/02/2021

ಮಡಿಕೇರಿ ಫೆ.4 : ಕಲ್ಲುಗಣಿ ಸುರಕ್ಷಿತ ಮತ್ತು ಅನಧಿಕೃತ ಗಣಿಗಾರಿಕೆ ತಡೆ ಮಾಸಿಕ ಸಪ್ತಾಹ” ಕಾರ್ಯಾಗಾರವು ಜಿಲ್ಲೆಯಲ್ಲಿ ಉಪ ವಿಭಾಗಾಧಿಕಾರಿಗಳ ಮತ್ತು ಹಿರಿಯ ಭೂವಿಜ್ಞಾನಿ ಅವರ ಉಪಸ್ಥಿತಿಯಲ್ಲಿ ಉಪ ವಿಭಾಗಾಧಿಕಾರಿ ಕಚೇರಿಯ ವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಈ ಸಪ್ತಾಹ ಆಚರಣೆಗೆ ಜಿಲ್ಲೆಯ ಎಲ್ಲಾ ಕಲ್ಲುಗಣಿ ಗುತ್ತಿಗೆದಾರರು ಹಾಜರಿದ್ದರು. ಸಪ್ತಾಹದಲ್ಲಿ ಹಾಜರಿದ್ದ ಕಲ್ಲುಗಣಿ ಗುತ್ತಿಗೆದಾರರಿಗೆ ಉಪ ವಿಭಾಗಾಧಿಕಾರಿಗಳು ಶಿವಮೊಗ್ಗದಲ್ಲಿ ಆದ ದುರ್ಘಟನೆ ಬಗ್ಗೆ ಎಚ್ಚರಿಸಿ ಜಿಲ್ಲೆಯಲ್ಲಿ ಕಾನೂನು ರೀತಿ ಸ್ಪೋಟಕಗಳನ್ನು ಬಳಸುವ ಬಗ್ಗೆ ಹಾಗೂ ಸ್ಥಳೀಯವಾಗಿ ಸಾರ್ವಜನಿಕರಿಗೆ ಸುರಕ್ಷಿತ ಕ್ರಮಗಳನ್ನು ಅನುಸರಿಸುತ್ತಿರುವ ಬಗ್ಗೆ ಜಾಗೃತಿಯನ್ನು ನೀಡಲು ಸೂಚಿಸಿ, ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ತಿಳಿಸಿದರು.
ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ ಅವರು ಮಾತನಾಡಿ ಗಣಿಗಾರಿಕೆ ಪ್ರದೇಶದಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಸುರಕ್ಷತೆ, ಪರಿಸರ ಸ್ನೇಹಿಯಂತೆ ಕಂಟ್ರೋಲ್ ಬ್ಲಾಸ್ಟ್ ಹಾಗೂ ಸ್ಥಳೀಯ ಗಿಡಮೂಲಿಕೆ ತಳಿಗಳನ್ನು ಅರಣ್ಯ ಇಲಾಖೆಯ ಸಲಹೆ ಸೂಚನೆ ಪಡೆದು ನೆಡುತೋಪುಗಳನ್ನು ಮಾಡುವುದರ ಮೂಲಕ ಗಣಿಗಾರಿಕೆ ಸಾಗಾಣಿಕೆ ಸಂಗ್ರಹಣೆ ಮಾಡಲು ಕರೆ ನೀಡಿದರು.
ಭೂವಿಜ್ಞಾನಿಗಳಾದ ನಾಗೇಶ್.ಡಿ, ಎಂ.ಎಸ್.ರಾಹುಲ್, ರೋಜಾ.ಎಚ್.ಡಿ ಹಾಗೂ ಲೊಯಲ್ ಗ್ಲಾಡ್‍ಸನ್ ಮಿರಾಂದ ಇವರು ಮತ್ತು ಕಚೇರಿ ಸಿಬ್ಬಂದಿಯವರು ನಿಯಮಗಳಂತೆ ಗುತ್ತಿಗೆಗಳನ್ನು ನಿರ್ವಹಣೆ ಮಾಡುವುದು ಹೇಗೆ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಬಗ್ಗೆ ತಿಳಿಸಿದರು.