ಹೊಸತೋಟದಲ್ಲಿ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿ

February 4, 2021

ಮಡಿಕೇರಿ ಫೆ.4 : ಸೋಮವಾರಪೇಟೆ ಹೊಸತೋಟ ಸ್ಪೂರ್ತಿ ಕ್ರೀಡಾ ಮತ್ತು ಸೇವಾ ಸ್ವಸಹಾಯ ಸಂಘ ಇವರ ಆಶ್ರಯದಲ್ಲಿ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿಯು ಫೆ.7 ರಂದು ಸೋಮವಾರಪೇಟೆಯ ಹೊಸತೋಟ ಸ್ಫೂರ್ತಿ ಸ್ಪೋಸ್ರ್ಟ್ ಕ್ಲಬ್ ನಲ್ಲಿ ನಡೆಯಲಿದೆ ಎಂದು ಸ್ಪೂರ್ತಿ ಕ್ರೀಡಾ ಮತ್ತು ಸೇವಾ ಸ್ವಸಹಾಯ ಸಂಘದ ಅಧ್ಯಕ್ಷರಾದ ಗೌತಮ್ ಶಿವಪ್ಪ ಅವರು ತಿಳಿಸಿದ್ದಾರೆ.
ಮೊದಲನೆ ಬಹುಮಾನ ರೂ.15 ಸಾವಿರ ಮತ್ತು ಟ್ರೋಪಿ, ದ್ವೀತಿಯ ಬಹುಮಾನ ರೂ. 8 ಸಾವಿರ ಮತ್ತು ಟ್ರೋಪಿ ಹಾಗೂ ತೃತಿಯ ಬಹುಮಾನ ರೂ.3 ಸಾವಿರ ಮತ್ತು ಟ್ರೋಪಿ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ದಾಖಲಾತಿಯು ಪ್ರಾರಂಭವಾಗಿದ್ದು, ಪ್ರವೇಶ ಶುಲ್ಕ ರೂ.1500 ಹಾಗೂ ಕೊಡಗಿನ ತಂಡಗಳಿಗೆ ರೂ.800 ಗಳಾಗಿದ್ದು, ಆಸಕ್ತ ತಂಡಗಳು ಫೆ.6 ರೊಳಗೆ ಮೊಬೈಲ್ ಸಂಖ್ಯೆ: 7760929195, 9448433292 ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು ಎಂದು ಸಂಘದ ಅಧ್ಯಕ್ಷರಾದ ಗೌತಮ್ ಶಿವಪ್ಪ ಅವರು ತಿಳಿಸಿದ್ದಾರೆ.

error: Content is protected !!