ಗೋಕರ್ಣ ಮುಖ್ಯ ಸಮುದ್ರ ತೀರದಲ್ಲಿ ಜೆಲ್ಲಿ ಫಿಶ್‌ ತಾಗಿ ಹಲವರಿಗೆ ಅಲರ್ಜಿ

February 5, 2021

ಗೋಕರ್ಣ: ಗೋಕರ್ಣ ಮುಖ್ಯ ಸಮುದ್ರ ತೀರದಲ್ಲಿ ಜೆಲ್ಲಿ ಫಿಶ್‌ ಹಾವಳಿ ಹೆಚ್ಚಾಗಿದೆ. ಗುರುವಾರ ಈಜಲು ಹೋದ ನೂತನ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಜೆಲ್ಲಿ ಫಿಶ್‌ ತಾಗಿ ಅಲರ್ಜಿಯಿಂದ (ತುರಿಕೆ) ತೊಂದರೆಗೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ, ಬುಧವಾರವೂ ವಿವಿಧೆಡೆಯಿಂದ ಬಂದ ಪ್ರವಾಸಿಗರಲ್ಲಿ ಆರು ಜನ ಈ ರೀತಿ ತೊಂದರೆ ಅನುಭವಿಸಿದ್ದಾರೆ.

ನೂತನ ಗ್ರಾಮ ಪಂಚಾಯಿತಿ ಸದಸ್ಯರು 10 ಜನರೊಂದಿಗೆ ಬೆಳಗಾವಿಯಿಂದ ಬಂದಿದ್ದರು ಎಂದು ತಿಳಿದುಬಂದಿದೆ. ತೊರ್ಕೆಮೀನು ಮುಳ್ಳು ಇರಿತದಿಂದ ಈ ರೀತಿ ತೊಂದರೆಯಾಗಿರಬಹುದು ಎಂದು ಸ್ಥಳೀಯ ಮೀನುಗಾರರು ಹೇಳುತ್ತಿದ್ದು, ಅಧಿಕಾರಿಗಳು ಪರಿಶೀಲನೆ ಕೈಗೊಂಡು ಪ್ರವಾಸಿಗರ ರಕ್ಷಣೆಗೆ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

error: Content is protected !!