ಭಾರತದ ಬಳಿಕ ಪಾಕ್ ಮೇಲೆ ಇರಾನ್ ಸರ್ಜಿಕಲ್ ಸ್ಟ್ರೈಕ್

February 5, 2021

ಟೆಹ್ರಾನ್: ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಇರಾನ್ ವಾಯುಪಡೆ ಸರ್ಜಿಕಲ್ ಸ್ಟ್ರೈಕ್ ನಡೆಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 

ತನ್ನ ಇಬ್ಬರು ಯೋಧರ ರಕ್ಷಣೆಗಾಗಿ ಇರಾನ್ ಸೇನೆ ಬಲೂಚಿಸ್ತಾನದೊಳಗೆ ನುಗ್ಗಿ ಜೈಶ್ ಉಲ್ ಅದ್ ಉಗ್ರ ನೆಲೆಗಳ ಮೇಲೆ ದಿಢೀರ್ ದಾಳಿ ನಡೆಸಿದ್ದು ತನ್ನ ಯೋಧರನ್ನು ರಕ್ಷಿಸಿರುವುದಾಗಿ ದಿ ವುಲ್ಫ್ ಪ್ಯಾಕ್ ಟ್ವೀಟ್ ಮಾಡಿದೆ. 

ಕಳೆದ ರಾತ್ರಿ ಇರಾನ್ ಸರ್ಜಿಕಲ್ ದಾಳಿ ನಡೆಸಿದೆ. ದಾಳಿಯಲ್ಲಿ ಉಗ್ರರಿಗೆ ರಕ್ಷಣೆ ನೀಡುತ್ತಿದ್ದ ಪಾಕಿಸ್ತಾನದ ಕೆಲವು ಸೈನಿಕರು ಸಾವಿಗೀಡಾಗಿರುವುದಾಗಿ ವರದಿ ಆಗಿದೆ. ಇನ್ನು ಇರಾನ್ ತನ್ನ ಯೋಧರ ಬಿಡುಗಡೆ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ.

ಇರಾನ್ ನ ರೆವಲ್ಯೂಷನರಿ ಪಡೆ(ಐಆರ್ ಜಿಸಿ) ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಪಾಕ್ ಸೇನೆಗೆ ಸುಳಿವೇ ಸಿಗದಂತೆ ಇರಾನ್ ಸೇನೆ ತಡ ರಾತ್ರಿ ಕಾರ್ಯಾಚರಣೆ ನಡೆಸಿದೆ.

error: Content is protected !!