ಕ್ಷೇತ್ರಗಳ ಅಭಿವೃದ್ಧಿಗೆ ಘೋಷಿಸಿರುವ ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ಬಿಎಸ್‌ವೈ ಘೋಷಣೆ

February 5, 2021

ಬೆಂಗಳೂರು: ಕ್ಷೇತ್ರಗಳ ಅಭಿವೃದ್ಧಿಗೆ ಘೋಷಿಸಿರುವ ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ಬಿಎಸ್‌ ಯಡಿಯೂರಪ್ಪ ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಕೊರೊನಾದಿಂದಾಗಿ ಕಂಗೆಟ್ಟಿದ್ದ ಶಾಸಕರಿಗೆ ಸಿಎಂ ಸಿಹಿ ಸುದ್ದಿ ನೀಡಿದ್ದಾರೆ. ಮಾರ್ಚ್ ಅಂತ್ಯಕ್ಕೆ ಘೋಷಿತ ಅನುದಾನ ಬಿಡುಗಡೆಯಾಗಲಿದೆ ಎಂದು ಸಿಎಂ ಬಿಎಸ್‌ವೈ ಮಾಹಿತಿ ನೀಡಿದರು. ಸದನದ ಮೂಲಕ ಆತಂಕಗೊಂಡಿದ್ದ ಸದಸ್ಯರಿಗೆ ಸಿಎಂ ಭರವಸೆ ನೀಡಿದರು.

ಯಾವ ಶಾಸಕರು ಆತಂಕಗೊಳ್ಳುವ ಅಗತ್ಯ ವಿಲ್ಲ. ಶೇಕಡ 85ರಷ್ಟು ಘೋಷಿತ ಅನುದಾನ ಬಿಡುಗಡೆ ಮಾಡಲು ತೀರ್ಮಾನ ಮಾಡಿದ್ದೇನೆ. ಈಗಾಗಲೇ ಘೋಷಣೆ ಮಾಡಿರುವ ಅನುದಾನ ಖರ್ಚು ಮಾಡಲು ಕ್ರಮಕೈಗೊಳ್ಳಲಾಗಿದೆ. ಮಾರ್ಚ್ ಅಂತ್ಯಕ್ಕೆ ಹಣ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ.

ಈ ಸಂಬಂಧಪಟ್ಟಂತೆ ಸೂಕ್ತ ಆದೇಶಗಳನ್ನು ಹೊರಡಿಸುತ್ತೇವೆ ಎಂದು ತಿಳಿಸಿದರು. ಆಡಳಿತ ಮತ್ತು ವಿಪಕ್ಷ ಶಾಸಕರು ಯಾವುದೇ ಕಾರಣಕ್ಕೂ ಆತಂಕಪಡಬೇಡಿ. ಆರ್ಥಿಕ ಇಲಾಖೆಯ ಮೂಲಕ ತಡೆ ಹಿಡಿಯಲಾದ ಅನುದಾನ ಕೊಡುವುದಾಗಿ ಸಿಎಂ ಘೋಷಣೆ ಮಾಡಿದರು. ಅಧಿವೇಶನದ ಕೊನೆಯ ದಿನ ಶಾಸಕರಿಗೆ ಭರವಸೆ ಮಾತನ್ನು ಸಿಎಂ ನೀಡಿದರು.ಕೊರೊನಾ ಹಿನ್ನೆಲೆ ಈ ಹಣವನ್ನು ತಡೆ ಹಿಡಿಯಲಾಗಿತ್ತು. ಇದೀಗ ಈ ಹಣವನ್ನು ನೀಡುವುದಾಗಿ ಸಿಎಂ ಬಿಎಸ್‌ ಯಡಿಯೂರಪ್ಪ ಘೋಷಿಸಿದರು.

error: Content is protected !!