ಫೆ.9 ರಂದು ಜೀವನಾಧಾರಿತ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ

February 5, 2021

ಮಡಿಕೇರಿ ಫೆ. 5 : ಬೆಂಗಳೂರು ನಬಾರ್ಡ್ ಮತ್ತು ಮೈಸೂರು ಒಡಿಪಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಡೆಸುವ ಕಸೂತಿ, ಜರಿ, ಕೃತಕ ಆಭರಣ ತಯಾರಿಕೆಗಳಾದ ಜೀವನಾಧಾರಿತ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಫೆಬ್ರವರಿ, 09 ರಂದು ಬೆಳಗ್ಗೆ 11 ಗಂಟೆಗೆ ವಿರಾಜಪೇಟೆ ಸೆಂಟ್‍ಆನ್ಸ್ ಸಭಾಂಗಣದಲ್ಲಿ ನಡೆಯಲಿದೆ.
ಮೈಸೂರು ಒಡಿಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಗುರು ಅಲೆಕ್ಸ್ ಪ್ರಶಾಂತ್ ಸಿಕ್ವೇರಾ, ಜಿಲ್ಲಾಧಿಕಾರಿ ಚಾರುಲತ ಸೋಮಲ್, ನಬಾರ್ಡ್ ಜಿಲ್ಲಾಭಿವೃದ್ಧಿ ವ್ಯವಸ್ಥಾಪಕರಾದ ಪಿ.ವಿ.ಶ್ರೀನಿವಾಸ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಿಂಗರಾಜಪ್ಪ, ವಲಯ ಶ್ರೇಷ್ಠ ಗುರುಗಳಾದ ವಂ.ಸ್ವಾಮಿ,.ಮದಲೈ, ಕೊಡಗು ಲೀಡ್ ಬ್ಯಾಂಕ್ ನಿರ್ದೇಶಕರಾದ ಬಾಲಚಂದ್ರ, ಮೈಸೂರು ಒಡಿಪಿ ಮಹಿಳಾಭಿವೃದ್ಧಿ ಸಂಯೋಜಕರಾದ ಮೋಲಿ ಪುಡ್ತಾಡೊ, ಒಡಿಪಿ ಕೌಶಲ್ಯಾಭಿವೃದ್ಧಿ ಯೋಜನಾ ಸಂಯೋಜಕರಾದ ಲಲಿತ, ವಲಯ ಸಂಯೋಜಕರಾದ ಜಾಯ್ಸ್ ಮೆನೇಜಸ್ಸ್, ಕಾರ್ಯಕರ್ತರಾದ ರೀಟಾ ಜೋಸೆಫ್, ಮಮತಾ ಇತರರು ಪಾಲ್ಗೊಳ್ಳಲಿದ್ದಾರೆ.

error: Content is protected !!