ಮಂಗಳೂರಿನ ಪಿಲಿಕುಳ ತಾರಾಲಯ ಮತ್ತೆ ಆರಂಭ

February 6, 2021

ಮಂಗಳೂರು ಫೆ. 6 : ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಸ್ವಾಮಿ ವಿವೇಕಾನಂದ ತಾರಾಲಯದಲ್ಲಿ ಕೋವಿಡ್ ಕಾರಣಗಳಿಂದ ನಿಲುಗಡೆಗೊಂಡ ವಿಜ್ಞಾನ ಪ್ರದರ್ಶನಗಳನ್ನು ಫೆ.6 ರಿಂದ ಪುನರಾರಂಭಿಸಲಾಗುತ್ತಿದೆ. ಪ್ರಥಮ ಹಂತದಲ್ಲಿ 2ಡಿ ಪ್ರದರ್ಶನಗಳನ್ನು ಕೋವಿಡ್ ನಿಯಮಗಳ ಷರತ್ತುಗಳನ್ನು ಪಾಲಿಸಿಕೊಂಡು ಮಧ್ಯಾಹ್ನ 2 ಮತ್ತು 3ಕ್ಕೆ ಪ್ರದರ್ಶಿಸಲಾಗುತ್ತದೆ. ಆಂಗ್ಲ ಭಾಷೆಯ ಚಿತ್ರಪ್ರದರ್ಶನವನ್ನು ವಾರದ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಹಾಗೂ ಇತರ ಪ್ರದರ್ಶನವನ್ನು ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಪ್ರದರ್ಶಿಸಲಾಗುತ್ತದೆ.

ಕೃಪೆ : ಕುಡ್ಲ ಸಿಟಿ

error: Content is protected !!