ಹಸುಗಳನ್ನು ಮಾಲೀಕರು ಪಡೆಯದಿದ್ದಲ್ಲಿ ಗೋಶಾಲೆಗೆ ಸ್ಥಳಾಂತರ : ಪೌರಾಯುಕ್ತ ರಾಮ್ ದಾಸ್ ಮುನ್ಸೂಚನೆ

February 6, 2021

ಮಡಿಕೇರಿ ಫೆ. 6 : ಮಡಿಕೇರಿಯ ಮಾರುಕಟ್ಟೆಯಲ್ಲಿ ಬೀಡಾಡಿ ಹಸುಗಳನ್ನು ಕೂಡಿ ಹಾಕಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಗರಸಭಾ ಪೌರಾಯುಕ್ತ ಎಸ್.ವಿ.ರಾಮದಾಸ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಬೀಡಾಡಿ ಜಾನುವಾರುಗಳಿಗೆ ಭತ್ತದ ಹುಲ್ಲು, ಹೆಚ್ಚಾದ ತರಕಾರಿಯನ್ನು ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ.
ಜಾನುವಾರುಗಳಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತದೆ ಎಂದು ದೂರು ಬರುತ್ತಿರುವುದರಿಂದ ಕ್ರಮ ಕೈಗೊಳ್ಳಲಾಗಿದೆ.

ಹಸುಗಳನ್ನು ಮಾಲೀಕರು ಪಡೆಯದಿದ್ದಲ್ಲಿ ಭಾಗಮಂಡಲದ ಗೋಶಾಲೆಗೆ ಸ್ಥಳಾಂತರ ಮಾಡಲಾಗುವುದು ಎಂದು ನಗರಸಭಾ ಪೌರಾಯುಕ್ತ ರಾಮ್ ದಾಸ್ ತಿಳಿಸಿದ್ದಾರೆ.

error: Content is protected !!