ಫೆ. 7 ರಂದು ಮಡಿಕೇರಿಯಲ್ಲಿ ಕೆಪಿಎಲ್ ಕ್ರಿಕೆಟ್ ಪಂದ್ಯಾಟ

February 6, 2021

ಮಡಿಕೇರಿ ಫೆ. 6 : ಹೆಬ್ಬೆಟ್ಟಗೇರಿ ವಿಸ್ಮಯ ಕ್ರಿಕೆಟರ್ಸ್ ವತಿಯಿಂದ ಕೆ.ನಿಡುಗಣೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಫೆ.7 ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 8 ಗಂಟೆಗೆ ಕೆ.ನಿಡುಗಣೆ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೊಕ್ಕಲೇರ ಕೆ. ಅಯ್ಯಪ್ಪ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಉಪನ್ಯಾಸಕರಾದ ಡಾ.ಮೇಜರ್ ರಾಘವ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ.ನಿಡುಗಣೆ ಗ್ರಾ.ಪಂ. ಅಧಿಕಾರಿ ನಂಜುಂಡಸ್ವಾಮಿ, ಉದ್ಯಮಿಗಳಾದ ಶರೀನ್, ಜಗದೀಶ್ ರೈ, ಸುರೇಶ್ ಮುತ್ತಪ್ಪ, ರಮ್ಮಿ ಕೃಷ್ಣಪ್ಪ, ಗ್ರಾ.ಪಂ. ಸದಸ್ಯ ಪಿ.ಸಿ. ರಘು, ಮಡಿಕೇರಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಕುಕ್ಕೇರ ಕವನ್, ಶ್ರೀ ಕರವಲೆ ಭಗವತಿ ದೇವಾಲಯ ಸಮಿತಿ ಅಧ್ಯಕ್ಷ ತೆಕ್ಕಡ ಸಂತು ಕಾರ್ಯಪ್ಪ ಪಾಲ್ಗೊಳ್ಳಲಿದ್ದಾರೆ.
ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಡಿಕೇರಿ ತಾ.ಪಂ. ಸದಸ್ಯ ಮುದ್ದಂಡ ರಾಯ್ ತಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಫೀಲ್ಡ್ ಮಾರ್ಷಲ್ ಕೆ.ಎಂ. ಕರ್ಯಪ್ಪ ಕಾಲೇಜಿನ ಉಪನ್ಯಾಸಕರಾದ ಎಂ.ಎನ್. ರವಿಶಂಕರ್, ಅನ್ನಪೂರ್ಣೇಶ್ವರಿ ಅರ್ಥ್ ಮೂವರ್ಸ್ ಅಂಡ್ ಕನ್ಸ್‍ಟ್ರಕ್ಷನ್ಸ್‍ನ ವಿಶಾಲ್ ರೈ, ಗ್ರಾ.ಪಂ. ಸದಸ್ಯರಾದ ಡೀನ್ ಬೋಪಣ್ಣ, ಉದಿಯಂಡ ರೀಟಾ ಮುತ್ತಣ್ಣ, ಜಾನ್ಸನ್ ಪಿಂಟೋ, ಸತೀಶ್ ಪೂಜಾರಿ, ಪುಷ್ಪಲತಾ ಪ್ರೇಮ್‍ಕುಮಾರ್, ಪ್ರಮೀಳಾ ಸುರೇಶ್, ಕೆ.ಡಿ. ಪಾರ್ವತಿ, ಅನಿತಾ ಪ್ರಮೋದ್ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಕೆ.ನಿಡುಗಣೆ ಗ್ರಾ.ಪಂ.ಗೆ ಆಯ್ಕೆಯಾದ ಸದಸ್ಯರನ್ನು ಅಭಿನಂದಿಸಲಾಗುತ್ತದೆ. ಅಲ್ಲದೆ, ಕೊರೊನಾ ವಾರಿಯರ್ಸ್‍ಗಳಾಗಿ ದುಡಿದ ಆಶಾ ಕಾರ್ಯಕರ್ತೆ ನಳಿನಿ, ಸ್ಟಾಪ್ ನರ್ಸ್ ಉಷಾ, ಲ್ಯಾಬ್ ಟೆಕ್ನಿಷಿಯನ್ ನಂದಿತಾ ಗೊನ್ಸಾಲ್‍ವೆನ್ಸ್ ಅವರನ್ನು ಸನ್ಮಾನಿಸಲಾಗುತ್ತದೆ. ಜೊತೆಗೆ 10ನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿ ಎಂ.ಜಿ. ಧನುಷ್ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆದಿದ್ದು, ಒಟ್ಟು 5 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ. ಹಿಮಾನಿ ಹಿಟ್ಟರ್ಸ್ ಹೆಬ್ಬೆಟ್ಟಗೇರಿ, ಮಿಸ್ಟಿ ಲೀಡ್ಸ್, ಕರವಲೆ ಭಗವತಿ ಬಾಯ್ಸ್, ಎಕ್ಸ್ ಲಯನ್ಸ್ ಸ್ಟ್ರೈಕರ್ಸ್, ಸ್ಪೂರ್ತಿ ಕ್ರಿಕೇಟರ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಪಂದ್ಯಾವಳಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಗಳಿಗೆ ಆಕರ್ಷಕ ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ. ಜೊತೆಗೆ ಮ್ಯಾನ್ ಆಪ್ ದಿ ಮ್ಯಾಚ್, ಮ್ಯಾನ್ ಆಪ್ ದಿ ಸೀರಿಸ್, ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್‍ಮ್ಯಾನ್, ಬೆಸ್ಟ್ ಪೀಲ್ಡರ್, ಬೆಸ್ಟ್ ಕ್ಯಾಚ್, ಅಪ್‍ಕಮಿಂಗ್ ಪ್ಲೇಯರ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಆಯೋಜಕರಾದ ರಮೇಶ್, ದರ್ಶಿತ್, ಸುಜಿತ್, ದಿನೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!