ಸೋಮವಾರಪೇಟೆಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

February 6, 2021

ಸೋಮವಾರಪೇಟೆ ಫೆ. 7 : ಆರೋಗ್ಯ ಇಲಾಖೆ ಕೊಡಗು ಜಿಲ್ಲೆ, ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ದಂತ ವೈದ್ಯಕೀಯ ಕಾಲೇಜು ವಿರಾಜಪೇಟೆ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಓರಲ್ ಹೆಲ್ತ್ ಪಾಲಿಸಿ ಹಾಗೂ ದಂತ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಉಚಿತ ದಂತ ಪಂಕ್ತಿ ಮತ್ತು ಚಿಕಿತ್ಸಾ ಶಿಬಿರ ಕಾರ್ಯಕ್ರಮ ನಡೆಯಿತು.
ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ. ಪಂ ಅಧ್ಯಕ್ಷೆ ನಳಿನಿ ಗಣೇಶ್ ಸರಕಾರದ ಯೋಜನೆಗಳು ಬಡವರ ಪಾಲಿಗೆ ವರದಾನವಾಗಿದ್ದು, ಇಂತಹ ಶಿಬಿರಗಳು ಗ್ರಾಮೀಣ ಮಟ್ಟದಲ್ಲಿ ಹೆಚ್ಚು ಹೆಚ್ಚು ನಡೆಯುವಂತಾಗಬೇಕು ಎಂದರು.
ಕಾರ್ಯಕ್ರಮದ ಬಗ್ಗೆ ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯೆ ಶ್ರದ್ಧಾ ಮಂಜುನಾಥ್ ಮಾತನಾಡಿ, ಬಿಪಿಎಲ್ ಕುಟುಂಬ ವ್ಯಾಪ್ತಿಗೆ ಬರುವ, ಮೂರಕ್ಕಿಂತ ಹೆಚ್ಚು ಹಲ್ಲು ಇಲ್ಲದಿದ್ದವರಿಗೆ ದಂತ ಪಂಕ್ತಿಯನ್ನು ತಯಾರಿಸಿ ಉಚಿತವಾಗಿ ಅಳವಡಿಸಿಕೊಡಲಾಗುವುದು. ಪ್ರತಿಯೊಬ್ಬರೂ ತಮ್ಮ ಬಾಯಿಯ ವಸಡಿನ ರಕ್ತಸ್ರಾವ, ಹಲ್ಲು ಹುಳುಕಿನ ಬಗ್ಗೆ ನಿರ್ಲಕ್ಷ ಮಾಡದೆ ವೈದ್ಯರಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಿ, ಭವಿಷ್ಯದಲ್ಲಿ ತಲೆದೋರುವ ಗಂಡಾಂತರದಿಂದ ಪಾರಾಗಿ ಎಂದರು.
ವಿರಾಜಪೇಟೆ ದಂತ ವೈದ್ಯಕೀಯ ಕಾಲೇಜಿನ ಡಾ. ಶಂಕರ್ ಕೃಷ್ಣ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆ ರೋಟರಿ ಹಿಲ್ಸ್‍ನ ಎಸ್.ಜೆ. ದೇವದಾಸ್ ಮಾತನಾಡಿದರು. ವೇದಿಕೆಯಲ್ಲಿ ಶನಿವಾರಸಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ದಂತ ವೈದ್ಯ ಬಿಪಿನ್ ಜೋಸ್, ವಿರಾಜಪೇಟೆ ದಂತ ವೈದ್ಯಕೀಯ ಕಾಲೇಜಿನ ವೈದ್ಯರುಗಳಾದ ಪಲ್ಲವಿ, ಖಾದರ್, ಉಣ್ಣಿ ಉಪಸ್ಥಿತರಿದ್ದರು. ಸೋಮವಾರಪೇಟೆ ಸರಕಾರಿ ಆಸ್ಪತ್ರೆಯ ಭಾನುಮತಿ ಹಾಗೂ ನಿಸರ್ಗ P್ಫ್ರರ್ಯಕ್ರಮ ನಿರ್ವಹಿಸಿದರು. ಹಲವಾರು ಮಂದಿ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನೆ ಪಡೆದುಕೊಂಡರು.

error: Content is protected !!