ರುಚಿ ನೋಡಿ : ಹಾಲಿನ ಗಿಣ್ಣು ಮಾಡುವ ವಿಧಾನ

February 6, 2021

ಹಾಲಿನ ಗಿಣ್ಣು

ಬೇಕಾದ ಸಾಮಗ್ರಿಗಳು : 1 ಲೀಟರ್ ಹಸುವಿನ ಗಿಣ್ಣು ಹಾಲು( ಕರು ಹಾಕಿದ ಮೊದಲ ದಿನದ ಹಾಲು), ತೆಂಗಿನ ತುರಿ, ಏಲಕ್ಕಿ ಪುಡಿ, ಸಕ್ಕರೆ (ರುಚಿಗೆ ತಕ್ಕಷ್ಟು),

ಮಾಡುವ ವಿಧಾನ : ಮೊದಲು ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ, ನಂತರ ಸಕ್ಕರೆ, ಏಲಕ್ಕಿ ಪುಡಿ, ತೆಂಗಿನ ತುರಿ,ಹಾಕಿ ಚನ್ನಾಗಿ ಕೈಯಾಡಿಸಿ ಅನಂತರ , ತಟ್ಟೆಗೆ ಹಾಕಿ, ಸೇಕಲದಲ್ಲಿ ಇಟ್ಟು 25 ನಿಮಿಷ ಬೇಯಿಸಿ, ಆರಿದ ನಂತರ ಬೇಕಾದ ಆಕಾರಕ್ಕೆ ಅನುಗುಣವಾಗಿ ಕತ್ತರಿಸಿ, ರುಚಿ ರುಚಿ ಗಿಣ್ಣು ಸವಿಯಲು ಸಿದ್ದ.

ಬರಹ :: Kollimada Raki

error: Content is protected !!