ಕೊಡಗಿಗೆ ಬಂದ ತೃತೀಯ ರಾಷ್ಟ್ರಪತಿ

February 6, 2021

ಮಡಿಕೇರಿ ಫೆ. 6 : ಈ ಹಿಂದೆ ಕೊಡಗಿಗೆ 1982ರಲ್ಲಿ ಜಿಲ್ಲಾಸ್ಪತ್ರೆಯ ಶಂಕುಸ್ಥಾಪನೆಗಾಗಿ ದೇಶದ ಆರನೇ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಭೇಟಿ ನೀಡಿದ್ದರೆ, 2006ರ ಏ.7ರಂದು 11ನೇ ರಾಷ್ಟ್ರಪತಿಯಾಗಿದ್ದ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಜನರಲ್ ತಿಮ್ಮಯ್ಯ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆಂದು ಜಿಲ್ಲೆಗೆ ಬಂದಿದ್ದರು. ರಾಮನಾಥ ಕೋವಿಂದ ಅವರು ಇದೀಗ ಕೊಡಗಿಗೆ ಭೇಟಿ ನೀಡಿರುವ ತೃತೀಯ ಹಾಗೂ ದೇಶದ 14ನೇ ರಾಷ್ಟ್ರಪತಿಯಾಗಿದ್ದಾರೆ.

error: Content is protected !!