ಫೆ. 19 ರಂದು ಕೊಂಡಂಗೇರಿಯಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ

February 6, 2021

ಮಡಿಕೇರಿ ಫೆ. 6 : ಬುಲೆಟ್ ಫ್ರೆಂಡ್ಸ್ ಕೊಂಡಂಗೇರಿ ಹಾಗೂ ಎಲಿಯನ್‍ಗಾಡ್ ಫ್ರೆಂಡ್ಸ್ ಯುವಕ ಸಂಘದ ಸಹಯೋಗದಲ್ಲಿ ಫೆ.19 ಮತ್ತು 20 ರಂದು ಕೊಡಗು ಪ್ರೀಮಿಯರ್ ಲೀಗ್ (ಕೆಪಿಎಲ್) ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಆಯೋಜಿಸಲಾಗಿದೆ ಎಂದು ಕೆಪಿಎಲ್ ಕಾರ್ಯಾಧ್ಯಕ್ಷ ಅಂದಾಯಿ ತಿಳಿಸಿದ್ದಾರೆ.
ಸತತ ನಾಲ್ಕನೇ ವರ್ಷ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತಿದ್ದು, ಕೊಂಡಂಗೇರಿಯ ಸರ್ಕಾರಿ ಶಾಲಾ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದೆ.
ಜಿಲ್ಲೆಯ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೊನಲು ಬೆಳಕಿನಲ್ಲಿ ಪಂದ್ಯಾಟವನ್ನು ಆಯೋಜಿಸಲಾಗಿದ್ದು, ರಾಷ್ಟ್ರೀಯ ತಂಡದ ಮಾಜಿ ವಾಲಿಬಾಲ್ ಕ್ರೀಡಾಪಟು ಸತೀಶ್ ಹಾಗೂ ಕೊಂಡಂಗೇರಿಯ ಹಿರಿಯ ಕ್ರೀಡಾಪಟುಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಫೆ. 19 ರಂದು ಕಾರ್ಯಕ್ರಮದ ಉದ್ಘಾಟನೆಯಾಗಲಿದ್ದು. ಫೆ.20 ರಂದು ಸಂಜೆ 7 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ರಾಜ್ಯದ ಮಾಜಿ ಗೃಹಮಂತ್ರಿ ರಾಮಲಿಂಗಾರೆಡ್ಡಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು ಎಂದರು.
ಗೋಷ್ಠಿಯಲ್ಲಿ ಬುಲೆಟ್ ಫ್ರೆಂಡ್ಸ್ ತಂಡದ ಕಾರ್ಯದರ್ಶಿ ಜಮಾಲ್, ಸದಸ್ಯ ನಜೀಬ್ ಇದ್ದರು.

error: Content is protected !!