ಪಾಲಿಬೆಟ್ಟದಲ್ಲಿ ಆರ್ಕಾಡ್ ಪಟ್ಟಾಣ್ ಬಾವ ಶಾವಲಿ ಉರೂಸ್ ಗೆ ಚಾಲನೆ

February 6, 2021

ಮಡಿಕೇರಿ ಫೆ. 6 : ಸರ್ವಧರ್ಮದ ಭಾವೈಕ್ಯತೆಯ ಕೇಂದ್ರ ಎಂದೇ ಪ್ರಸಿದ್ಧಿಯಾಗಿರುವ ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾವ ಶಾವಲಿ ಉರೂಸ್ ಗೆ ಚಾಲನೆ ದೊರೆಯಿತು.
ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಯೊಂದಿಗೆ ಜುಮಾ ನಮಾಜಿನ ನಂತರ ಕಾಲ್ನಡಿಗೆಯಲ್ಲಿ ದರ್ಗಾದವರೆಗೆ ಮೆರವಣಿಗೆಯಲ್ಲಿ ಸಾಗಿ ವಿಶೇಷ ಪ್ರಾರ್ಥನೆಯೊಂದಿಗೆ ಕೇರಳದ ಧಾರ್ಮಿಕ ಪಂಡಿತ ಸಯ್ಯದಲಿ ಶಿಹಾಬುದ್ದೀನ್ ಅಲ್ ಹೈದ್ರೋಸಿ ಅಹ್ಸನಿ ಕಲ್ಲರಕ್ಕಲ್ ಅವರು ಧ್ವಜಾರೋಹಣ ನೆರವೇರಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪಾಲಿಬೆಟ್ಟ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಎಂ. ಸೈನುದ್ದೀನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರದ್ಧಾ ಭಕ್ತಿಯ ಧಾರ್ಮಿಕ ಕೇಂದ್ರ ಎಂದೇ ಪ್ರಸಿದ್ಧಿಯಾಗಿರುವ ಉರೂಸ್ ಗೆ ಜಾತಿ ಮತ ಭೇದವಿಲ್ಲದೆ ಭಕ್ತಾದಿಗಳು ಭಾಗವಹಿಸುತ್ತಿದ್ದು, ಉರೂಸ್ ಕೊನೆ ದಿನವಾದ ಫೆ. 8 ರಂದು 4ಗಂಟೆಯಿಂದ ಎಲ್ಲ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಕೋವಿಡ್ ನಿಯಮ ಪಾಲನೆ ಮಾಡುವ ಮೂಲಕ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಹಕರಿಸ ಬೇಕೆಂದರು.
ಈ ಸಂದರ್ಭ ಮಸೀದಿಯ ಖತೀಬ್ ಅಲಿ ಸಖಾಫಿ, ಪಾಲಿಬೆಟ್ಟ ಜಮಾಅತ್ ಕಾರ್ಯದರ್ಶಿ ಹನೀಫ್, ಖಾಲಿದ್, ಖಜಾಂಚಿ ಟಿ.ಕೆ. ಮುಸ್ತಫ,ಸಹ ಕಾರ್ಯದರ್ಶಿ ಸಮೀರ್, ಶೌಕತ್ ಸೇರಿದಂತೆ ಆಡಳಿತ ಮಂಡಳಿಯ ಪ್ರಮುಖರು ಹಾಜರಿದ್ದರು.

error: Content is protected !!