ಮಲ್ನಾಡ್ ಗಲ್ಫ್ ಅಸೋಸಿಯೇಷನ್ ನ ಕರ್ನಾಟಕ ಶಾಖೆಗೆ ನೂತನ ಪದಾಧಿಕಾರಿಗಳ ಆಯ್ಕೆ

February 6, 2021

ಕುಶಾಲನಗರ ಫೆ.6 : ದೇಶ ವಿದೇಶಗಳಲ್ಲೂ ನೊಂದವರ ಧ್ವನಿಯಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಮಲ್ನಾಡ್ ಗಲ್ಫ್ ಅಸೋಷಿಯೇಷನ್ ಇದೀಗ ಕರ್ನಾಟಕದ ಶಾಖೆಗೆ ನೂತನ ಪದಾಧಿಕಾರಿಗಳನ್ನ ಕೇಂದ್ರ ಸಮಿತಿಯ ಅಧ್ಯಕ್ಷ ಶರೀಫ್ ಕಳಸ ಅವರ ಆದೇಶದಂತೆ ನೇಮಕಗೊಳಿಸಿದೆ.

ಸಂಸ್ಥೆಯ ನೂತನ ಟ್ರಸ್ಟಿಗಳಾಗಿ ಬಶೀರ್ ಬಾಳುಪೇಟೆ, ಚಿಕ್ಕಮಂಗಳೂರು ಜಿಲ್ಲೆಯ ಯೂಸುಫ್ ಹಾಜಿ, ಮೂಡಿಗೆರೆಯ ಮೊಹಮ್ಮದ್ ಫಾರೂಕ್, ಕೊಡಗಿನ ನೌಶಾದ್ ಜನ್ನತ್ತ್, ಹಾಸನದ ಹಸೈನಾರ್ ಆನೆಮಹಲ್, ಅಕ್ರಂ, ಅಬ್ದುಲ್ ಖಾದರ್, ನಿಯಾಜ್ ಅಹಮ್ಮದ್,
ಟಿ. ಎಂ. ಸಿರಾಜುದ್ದಿನ್ ಅವರನ್ನ ಆಯ್ಕೆ ಮಾಡಲಾಯಿತು.
ಇತ್ತೀಚೆಗೆ ಚಿಕ್ಕಮಗಳೂರು ನಲ್ಲಿ ನಡೆದ ನೋಂದಾವಣೆ ಕಾರ್ಯ ಮತ್ತು ಪ್ರಥಮ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳ ಪದಾಧಿಕಾರಿಗಳು ಹಾಜರಿದ್ದರು .
ಸಂಸ್ಥೆಗೆ ನೂತನ ಟ್ರಸ್ಟಿಯಾಗಿ ಕೊಡಗಿನಿಂದ ಆಯ್ಕೆಯಾದ ನೌಶಾದ್ ಜನ್ನತ್ ಪತ್ರಿಕೆಯೊಂದಿಗೆ ಮಾತನಾಡಿ ಮಲ್ನಾಡ್ ಗಲ್ಫ್ ಅಸೋಷಿಯೇಷನ್ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಕೊಡಗು ಜಿಲ್ಲೆಯ ಪ್ರವಾಹ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಕಿಟ್ ಗಳನ್ನು ವಿತರಿಸಿದೆ .ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಅಸೋಸಿಯೇಶನ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ರಾಜ್ಯಾದ್ಯಂತ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಸಭೆ ತೀರ್ಮಾನಿಸಿದೆ ಎಂದು ತಿಳಿಸಿದರು.

error: Content is protected !!