ಜೆಸಿಬಿ ತಂದ ಸಾವು : ಸೋಮವಾರಪೇಟೆ ನೇಗಳ್ಳೆ ಗ್ರಾಮದಲ್ಲಿ ಘಟನೆ

February 6, 2021

ಸೋಮವಾರಪೇಟೆ ಫೆ.6 : ಜೆಸಿಬಿ ತಾಗಿ ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ನೇಗಳ್ಳೆ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.
ನೇರಳೆ ಗ್ರಾಮದ ಸೋಮಯ್ಯ ಎಂಬವರ ಪುತ್ರ ಪ್ರದೀಪ್(36) ಮೃತ. ನೇಗಳ್ಳೆ ಗ್ರಾಮದ ರಮೇಶ್ ಎಂಬವರ ಜಾಗದಲ್ಲಿ ಕೆಲಸ ಮಾಡಿಸುತ್ತಿದ್ದ ಸಂದರ್ಭ ಪ್ರದೀಪ್‍ಗೆ ಜೆಸಿಬಿ ತಾಗಿದೆ. ತಲೆ ಹಾಗು ಭುಜದ ಭಾಗಕ್ಕೆ ತೀವ್ರ ಗಾಯವಾಗಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!