ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ : ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ

February 6, 2021

ಸೋಮವಾರಪೇಟೆ ಫೆ.6 : ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಚೌಡ್ಲು ವಿಶ್ವಮಾನವ ಕುವೆಂಪು ಶಾಲೆಯ 10 ನೇ ತರಗತಿ ಪ್ರತಿಭಾವಂತ ಇಬ್ಬರು ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‍ಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿನಿಯರಾದ ರಶ್ಮಿತಾ ಮತ್ತು ಅನನ್ಯ ಅವರುಗಳು ಕ್ಲಬ್ ಅಧ್ಯಕ್ಷೆ ಕವಿತಾ ವಿರೂಪಾಕ್ಷ ಅವರಿಂದ ಪಡೆದರು. ಕ್ಲಬ್‍ನ ಸದಸ್ಯೆ ಅಮೃತ ಕಿರಣ್ ಅವರು ಟ್ಯಾಬ್‍ಗಳನ್ನು ನೀಡಿದ್ದಾರೆ. ಈ ಸಂದರ್ಭ ಕ್ಲಬ್ ಕಾರ್ಯದರ್ಶಿ ಸರಿತಾ ರಾಜೀವ್, ಪದಾಧಿಕಾರಿಗಳಾದ ಆಶಾ ಯೋಗೇಂದ್ರ, ನಂದಿನಿಗೋಪಾಲ್, ತನ್ಮಯಿ ಪ್ರವೀಣ್, ಕಾವೇರಿ ಸುರೇಶ್ ಮತ್ತು ಶಾಲಾ ಮುಖ್ಯಶಿಕ್ಷಕಿ ಮಿಲ್‍ಡ್ರೆಡ್ ಗೋನ್ಸಾಲ್ವೆಸ್ ಇದ್ದರು.

error: Content is protected !!