ತಡೆಗೋಡೆ ಕುಸಿಯುತ್ತಿರುವ ಆತಂಕ : ಸೋಮವಾರಪೇಟೆ ಪ.ಪಂ ಅಧ್ಯಕ್ಷರಿಂದ ಸ್ಥಳ ಪರಿಶೀಲನೆ

February 6, 2021

ಸೋಮವಾರಪೇಟೆ ಫೆ.6 : ರೇಂಜರ್ಸ್ ಬ್ಲಾಕ್‍ನಲ್ಲಿ ನಿರ್ಮಾಣ ಹಂತದಲ್ಲಿರುವ ತಡೆಗೋಡೆ ಕುಸಿಯುತ್ತಿರುವುದರಿಂದ ಅಲ್ಲಿನ ನಿವಾಸಿಗಳಲ್ಲಿ ಆತಂಕ ಎದುರಾಗಿದೆ.
ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಳಿನಿ ಗಣೇಶ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಳೆಹಾನಿ ಪರಿಹಾರ ನಿಧಿಯಡಿ 8 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಶೀತದಿಂದ ಆಗಾಗ್ಗೆ ಮಣ್ಣು ಕುಸಿಯುತ್ತಿರುವದರಿಂದ ಮನೆಗಳಿಗೂ ಆತಂಕ ಎದುರಾಗಿದೆ ಎಂದು ಸ್ಥಳೀಯ ನಿವಾಸಿಗಳು ಅಧ್ಯಕ್ಷರ ಗಮನ ಸೆಳೆದರು.
ಪ್ರಸ್ತುತ ಲಭ್ಯವಿರುವ ಅನುದಾನದಲ್ಲಿ ತಡೆಗೋಡೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಹೆಚ್ಚಿನ ಅನುದಾನ ಒದಗಿಸುವಂತೆ ಸ್ಥಳೀಯರು ಬೇಡಿಕೆ ಮುಂದಿಟ್ಟರು. ನಗರೋತ್ಥಾನ ಯೋಜನೆಯಡಿ ಹೆಚ್ಚುವರಿ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವದು ಎಂದು ನಳಿನಿ ಗಣೇಶ್ ಭರವಸೆ ನೀಡಿದರು. ಈ ಸಂದರ್ಭ ವಾರ್ಡ್ ಸದಸ್ಯ ಜೀವನ್ ಸೇರಿದಂತೆ ಸ್ಥಳೀಯರು ಇದ್ದರು.

error: Content is protected !!