ಬಿಗಿಭದ್ರತೆಯ ನಡುವೆ ಮಡಿಕೇರಿ ಆಸ್ಪತ್ರೆ ಸಿಬ್ಬಂದಿಗಳೆಡೆಗೆ ಕೈಬೀಸಿದ ರಾಷ್ಟ್ರಪತಿಗಳು

February 6, 2021

ಮಡಿಕೇರಿ ಫೆ.6 : ಭಾರತೀಯ ಸೇನೆ ಮತ್ತು ಕೊಡಗು ಪೊಲೀಸರ ಬಿಗಿ ಭದ್ರತೆಯ ನಡುವೆ ‘ಜನರಲ್ ತಿಮ್ಮಯ್ಯ ಮ್ಯೂಸಿಯಂ’ ಉದ್ಘಾಟನೆಗೊಳಿಸಿ ವಿಶೇಷ ವಾಹನದಲ್ಲಿ ತೆರಳುತ್ತಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನಗರದ ಜಿಲ್ಲಾ ಆಸ್ಪತ್ರೆಯ ಬಳಿ ತಟ್ಟನೆ ಕಾರಿನಿಂದಿಳಿದು ಸಾಲುಗಟ್ಟಿ ನಿಂತಿದ್ದ ಆಸ್ಪತ್ರೆ ಸಿಬ್ಬಂದಿ ಹಾಗೂ ಜನರತ್ತ ಕೈಬೀಸಿದರು.
ರಾಷ್ಟ್ರಪತಿಗಳ ತಲಕಾವೇರಿ ಭೇಟಿ, ಮಧ್ಯಾಹ್ನದ ವೇಳೆಯ ಮ್ಯೂಸಿಯಂ ಉದ್ಘಾಟನೆ ಇವೆಲ್ಲವು ಬೆರಳೆಣಿಕೆಯ ಗಣ್ಯರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮಗಳು. ಮಡಿಕೇರಿ ಸೇರಿದಂತೆ ರಾಷ್ಟ್ರಪತಿ ತೆರಳುವ ಮಾರ್ಗಗಳಲ್ಲೆಲ್ಲ ಪೊಲೀಸರು ಮತ್ತು ಯೋಧರ ಬಿಗಿ ಪಹರೆಯಲ್ಲಿತ್ತು. ಇದರ ನಡುವೆ ರಾಷ್ಟ್ರದ ಪ್ರಥಮ ಪ್ರಜೆಯನ್ನು ಕಾಣುವುದು ಅಸಾಧ್ಯದ ಮಾತು.
ಹೀಗಿದ್ದೂ ಸನ್ನಿಸೈಡ್ ಮ್ಯೂಸಿಯಂ ಬಳಿಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನೆರೆದಿದ್ದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು, ಕನಿಷ್ಟ ಕಾರಿನೊಳಗೆ ಕುಳಿತ ರಾಷ್ಟ್ರಪತಿಗಳನ್ನಾದರು ನೋಡಬಹುದೆಂದು ಕಾಯ್ದು ಕುಳಿತಿದ್ದರು. ಅಷ್ಟರಲ್ಲೆ ಕಾರಿನಿಂದಿಳಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅತ್ತ ಕಡೆ ಕೈಬೀಸಿ ನೆರೆದಿದ್ದವರಲ್ಲಿ ಹರ್ಷ ಮೂಡಿಸಿದರು.

error: Content is protected !!