ಅಂಗಡಿಗಳು ಬಂದ್, ರಸ್ತೆ ಖಾಲಿ ಖಾಲಿ : ಪ್ರಯಾಣಿಕರ ಪರದಾಟ

February 6, 2021

ಮಡಿಕೇರಿ ಫೆ.6 : ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು. ರಾಷ್ಟ್ರಪತಿಯವರು ಹೆಲಿಪ್ಯಾಡ್‍ನಿಂದ ಸುದರ್ಶನ ಅತಿಥಿಗೃಹಕ್ಕೆ ತೆರಳುವ ಮಾರ್ಗದಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಪೂರ್ವಾಹ್ನ 11ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮುಚ್ಚುವಂತೆ ಜಿಲ್ಲಾಡಳಿತ ಆದೇಶಿಸಿದ್ದರೂ, ಬಹುತೇಕ ಅಂಗಡಿ ಮುಂಗಟ್ಟುಗಳು ಬೆಳಗಿನಿಂದಲೇ ಮುಚ್ಚಲ್ಪಟ್ಟಿದ್ದವು.
ಅಲ್ಲದೆ ಬೆಳಗಿಂದಲೇ ನಗರದಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಇದರಿಂದಾಗಿ ಮಡಿಕೇರಿ ನಗರದಲ್ಲಿ ಅಘೋಷಿತ ಬಂದ್‍ನ ವಾತಾವರಣ ನಿರ್ಮಾಣವಾಗಿತ್ತು.
::: ಪ್ರಯಾಣಿಕರ ಪರದಾಟ :::
ಅತ್ತ ಮುಖ್ಯ ರಸ್ತೆಯಲ್ಲಿ ಪೊಲೀಸರು, ವಾಹನ ಸಂಚಾರವನ್ನು ಮಧ್ಯಾಹ್ನದಿಂದಲೇ ನಿಬರ್ಂಧಿಸಿದ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳು ರಸ್ತೆಗಿಳಿಯದೆ ಪ್ರಯಾಣಿಕರು ಬಸ್ ನಿಲ್ದಾಣದಲ್ಲೇ ಸಂಜೆಯವರೆಗೆ ಕಾಯುವಂತಾಯಿತು. ರಾಷ್ಟ್ರಪತಿಯವರು ಭೋಜನ ಹಾಗೂ ವಿಶ್ರಾಂತಿಗಾಗಿ ನಗದರ ಹೊರವಲಯದ ರೆಸಾರ್ಟ್‍ಗೆ ತೆರಳಿದ ಮಾಹಿತಿ ಇದ್ದರೂ, ಪೊಲೀಸ್ ಇಲಾಖೆ ಇಡೀ ಮಧ್ಯಾಹ್ನ 1 ಗಂಟೆಯಿಂದಲೇ ಸಂಚಾರವನ್ನು ನಿರ್ಬಂಧಿಸಿದ್ದು, ಸಾರ್ವಜನಿಕರ ಅಸಮಾಧಾನಕ್ಕೂ ಕಾರಣವಾಯಿತು.

error: Content is protected !!