ಕೆರೆಯಲ್ಲಿ ಬಿದ್ದು ಬಾಲಕ ಸಾವು : ಹುಂಡಿ ಗ್ರಾಮದಲ್ಲಿ ಘಟನೆ

February 7, 2021

ಮಡಿಕೇರಿ ಫೆ.7 : ಬಾಲಕನೋರ್ವ ಆಕಸ್ಮಿಕವಾಗಿ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಹುಂಡಿ ಗ್ರಾಮದಲ್ಲಿ ನಡೆದಿದೆ.
ಕೆರೆಯ ಬದಿಯಲ್ಲಿ ಆಟವಾಡುತ್ತಿದ್ದ ಸಂದರ್ಭ ಕಾಲು ಜಾರಿ ಬಿದ್ದ ವಿದ್ಯಾರ್ಥಿ ಹಫೀಸ್ (13) ಎಂಬಾತನೇ ಮೃತ ದುರ್ದೈವಿ. ಈತ ಚೆನ್ನಯ್ಯನಕೋಟೆಯ ಉಮ್ಮರ್ ಎಂಬುವವರ ಪುತ್ರ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!