ಗ್ರಾ.ಪಂ ಮಾಜಿ ಸದಸ್ಯೆ ಮನೆ ಎದುರು ವಾಮಾಚಾರ : ಚೆಟ್ಟಳ್ಳಿ ಪೊಲೀಸರಿಂದ ತನಿಖೆ

February 7, 2021

*ಸಿದ್ದಾಪುರ ಫೆ.7 : (ಅಂಚೆಮನೆ ಸುಧಿ) ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ಮಾಜಿ ಸದಸ್ಯೆ ಅಭ್ಯತ್ ಮಂಗಲ ಗ್ರಾಮದ ಜ್ಯೋತಿ ನಗರ ಬಡಾವಣೆ ನಿವಾಸಿ ಜಮೀಲ ಎಂಬುವವರ ಮನೆ ಎದುರು ವಾಮಾಚಾರ ಗೋಚರಿಸಿದೆ.
ರಾತ್ರಿ ವೇಳೆ ಯಾರೋ ಕಿಡಿಗೇಡಿಗಳು ಕೋಳಿಮೊಟ್ಟೆ, ಬಳೆ, ಸರ, ನೂಲು ಸೇರಿದಂತೆ ಅರಶಿನ ಮಿಶ್ರಿತ ವಸ್ತುಗಳನ್ನು ಇಟ್ಟು ಹೋಗಿದ್ದಾರೆ. ಇಂದು ಬೆಳಗ್ಗೆ ಜಮೀಲ ಅವರಿಗೆ ಇದು ಗೋಚರಿಸಿದ್ದು, ಚೆಟ್ಟಳ್ಳಿ ಪೊಲೀಸ್ ಉಪಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಲವು ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಜಮೀಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದನ್ನು ಆಧರಿಸಿ ತನಿಖೆ ಮುಂದುವರೆದಿದೆ.

error: Content is protected !!