ಬೋಯಿಕೇರಿಯಲ್ಲಿ ರಾಜ್ಯಮಟ್ಟದ ಕಾಲ್ಚೆಂಡು ಪಂದ್ಯಾಟ : ಕ್ಲಾಸಿಕ್ ಚೆರುಕುನ್ನು ಚಾಂಪಿಯನ್

February 8, 2021

ಮಡಿಕೇರಿ ಜ. 8 : ಬೋಯಿಕೇರಿ ಫುಟ್ಬಾಲ್ ಕ್ಲಬ್ (ಬಿ.ಎಫ್.ಸಿ) ವತಿಯಿಂದ ಬೋಯಿಕೇರಿಯ ಜಿಎಂಪಿ ಶಾಲಾ ಮೈದಾನದಲ್ಲಿ ನಡೆದ ರಾಜ್ಯಮಟ್ಟದ 5+2 ಜನರ ಕಾಲ್ಚೆಂಡು ಪಂದ್ಯಾಟದಲ್ಲಿ ಚಾಂಪಿಯನ್ ಪಟ್ಟವನ್ನು ಕ್ಲಾಸಿಕ್ ಚೆರುಕುನ್ನು ತಂಡ ತನ್ನದಾಗಿಸಿಕೊಂಡರೆ. ಚಾಮುಂಡಿ ಯೂತ್ ಕ್ಲಬ್ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು.
ಚಾಮುಂಡಿ ಯೂತ್ ಕ್ಲಬ್ ಹಾಗೂ ಕ್ಲಾಸಿಕ್ ಚೇರುಕುನ್ನು ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ1-0 ಅಂತರದಲ್ಲಿ ಕ್ಲಾಸಿಕ್ ಕಣ್ಣೂರು ತಂಡ ಜಯಶಾಲಿಯಾಗುವ ಮೂಲಕ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು. ಕ್ಲಾಸಿಕ್ ತಂಡದ ಪರ ಚಿಕ್ಕುಟನ್ ಅವರು 1 ಗೋಲು ಬಾರಿಸಿದರು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕ್ಲಾಸಿಕ್ ಚೆರುಕುನ್ನು ತಂಡ ಅಮಿಟಿ ಗದ್ದಲ ಬಿ ತಂಡವನ್ನು 2-0 ಅಂತರದಲ್ಲಿ ಮಣಿಸುವ ಮೂಲಕ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದರೆ. ಚಾಮುಂಡಿ ಯೂತ್ ಕ್ಲಬ್, ಅಶೋಕ್ ಮಾಲೀಕತ್ವದ ಶರಿನ್.ಎಫ್.ಸಿ ಮಡಿಕೇರಿ ನಡುವೆ ನಡೆದ ಎರಡನೇ ಸೆಮಫೈನಲ್ ಪಂದ್ಯದಲ್ಲಿ ಚಾಮುಂಡಿ ಯೂತ್ ಕ್ಲಬ್ 4-0 ಅಂತರಗಳಲ್ಲಿ ಗೆಲುವು ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿತ್ತು.
ಸೆಮಿಫೈನಲ್ ನಲ್ಲಿ ಪರಾಜಿತಗೊಂಡ
ಶರಿನ್.ಎಫ್.ಸಿ ಮಡಿಕೇರಿ ಹಾಗೂ ಅಮಿಟಿ ಗದ್ದಲ ಬಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಸಮಬಲ ಸಾಧಿಸಿ ಪೆನಾಲ್ಟಿ ಶೂಟೌಟ್ ನಲ್ಲಿ 3-2 ಅಂತರದಲ್ಲಿ ಗೆಲುವು ಸಾಧಿಸಿದ ಅಮಿಟಿ ಗದ್ದಲ ತಂಡ ಮೂರನೇ ಸ್ಥಾನ ಪಡೆದುಕೊಂಡಿತು.
ಇದೆ ಸಂದರ್ಭ ವಿಶೇಷವಾಗಿ ಆಯೋಜಿಸಲಾಗಿದ್ದ ಬಾಲಕಿಯರ ಪ್ರದರ್ಶನ ಪಂದ್ಯದಲ್ಲಿ ಜಿ.ಎಫ್.ಜಿ.ಸಿ ವಿರಾಜಪೇಟೆ ತಂಡ ಎಫ್ಎಂಸಿ ಮಡಿಕೇರಿ ತಂಡವನ್ನು 1-0 ಅಂತರದಿಂದ ಮಣಿಸಿತ್ತು. ಜಿ.ಎಫ್.ಜಿ.ಸಿ ತಂಡದ ಸುಷ್ಮಿತಾ 1 ಗೋಲು ಗಳಿಸಿದರು.
ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಪಂದ್ಯಾವಳಿಯ ಬೆಸ್ಟ್ ಟೀಂ ಪ್ರಶಸ್ತಿಯನ್ನು ಟೀಂ ಮಂಜೇಶ್ವರ ಪಡೆದುಕೊಂಡರೆ. ಬೆಸ್ಟ್ ಗೋಲಿ ಸಾಬು, ಕ್ಲಾಸಿಕ್ ಚೆರುಕುನ್ನು, ಬೆಸ್ಟ್ ಡಿಫೆಂಡರ್ ಅಖಿಲ್, ಆಪ್ ಕಮ್ಮಿಂಗ್ ಪ್ಲೇಯರ್ ಇರ್ಷಾದ್ ಶರಿನ್ ಎಫ್.ಸಿ, ಹೈಯೆಸ್ಟ್ ಸ್ಕೋರರ್ ಪ್ರಸ್ತಿಯನ್ನು ಚಾಮುಂಡಿ ಯೂತ್ ಕ್ಲಬ್ ನ ಮಿನು, ಎನರ್ಜಿಟಿಕ್ ಪ್ಲೇಯರ್ ರೇಶಿದ್ ಅಮಿಟಿ ಬಿ, ಬೆಸ್ಟ್ ಪ್ಲೇಯರ್ ಚಿಕ್ಕುಟನ್ ಕ್ಲಾಸಿಕ್ ಚೆರುಕುನ್ನು ಪಡೆದುಕೊಂಡರು.
ಪಂದ್ಯಾವಳಿಯಲ್ಲಿ ಮುಖ್ಯ ತೀರ್ಪುಗಾರರಾಗಿ ನರಸಿಂಹ, ಕರಣ್, ಉನೈಸ್ ಕಾರ್ಯ ನಿರ್ವಹಿಸಿದರು..

error: Content is protected !!