ಭಾರತದ ವಿರುದ್ಧ ಮೀನಾ ಹ್ಯಾರಿಸ್ ಸರಣಿ ಟ್ವೀಟ್

February 8, 2021

ನವದೆಹಲಿ: ರೈತರ ಹೋರಾಟ ಮುಂದಿಟ್ಟುಕೊಂಡು ಭಾರತದ ವಿರುದ್ಧ ಅಂತಾರಾಷ್ಟ್ರೀಯ ಪಿತೂರಿ ಮುಂದುವರೆದಿದೆ. ಅದರಲ್ಲೂ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೊಸೆ ಮೀನಾ ಹ್ಯಾರಿಸ್ ಸರಣಿ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ.

ವಕೀಲೆ ಆಗಿರುವ ಮೀನಾ ಹ್ಯಾರಿಸ್ ತಮ್ಮ ಟ್ವೀಟ್ ನಲ್ಲಿ ಇದು ಕೇವಲ ಕೃಷಿ ನೀತಿ ವಿಚಾರವಲ್ಲ. ಇದು ಧಾರ್ಮಿಕ ಅಲ್ಪಸಂಖ್ಯಾತರ ಕಿರುಕುಳ, ಪೊಲೀಸ್ ಹಿಂಸೆ, ರಾಷ್ಟ್ರೀಯ ಭಯೋತ್ಪಾದನೆ, ಕಾರ್ಮಿಕ ಹಕ್ಕುಗಳ ಮೇಲಿನ ದಾಳಿಗೆ ಸಂಬಂಧಿಸಿದ್ದು, ನಿಮ್ಮ ಆಂತರಿಕ ವ್ಯವಹಾರಗಳಿಂದ ದೂರ ಇರಲು ಹೇಳಬೇಡಿ. ಇವೆಲ್ಲವೂ ನಮ್ಮ ಸಮಸ್ಯೆಗಳೇ ಎಂದು ಹ್ಯಾರಿಸ್ ಭಾರತದ ವಿರುದ್ಧ ಕಿಡಿಕಾರಿದ್ದಾರೆ.

ಇನ್ನು ಮತ್ತೊಂದು ಟ್ವೀಟ್ ನಲ್ಲಿ ಸಿಂಘು ಗಡಿಯಲ್ಲಿ ಬಂಧಿಕ್ಕೀಡಾಗಿದ್ದ ನೊದೀಪ್ ಕೌರ್ ಎಂಬ ದಲಿತ ಕಾರ್ಯಕರ್ತೆಗೆ ಪೊಲೀಸರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಆಕೆಯನ್ನು 20 ದಿನಗಳಿಂದ ಕೋರ್ಟ್ ಗೂ ಹಾಜರುಪಡಿಸದೇ ಹಿಂಸೆ ನೀಡಲಾಗುತ್ತಿದೆ. ಈ ಮೂಲಕ ಭಾರತದಲ್ಲಿ ದಮನಕಾರಿ ಪ್ರವೃತ್ತಿ ಹೆಚ್ಚುತ್ತಿದೆ ಎಂದೆಲ್ಲಾ ಆರೋಪ ಮಾಡಿದ್ದಾರೆ. 

error: Content is protected !!