ಮದೆ ವಿದ್ಯಾಸಂಸ್ಥೆ ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ಹಸ್ತಾಂತರ

February 8, 2021

ಮಡಿಕೇರಿ ಫೆ. 8 : ಮದೆನಾಡುವಿನ ಮದೆ ಮಹೇಶ್ವರ ವಿದ್ಯಾಸಂಸ್ಥೆಯನ್ನು ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನಕ್ಕೆ ಹಸ್ತಾಂತರಿಸುವ ಹಾಗೂ ಮಠದ ಶಾಖೆಯ ಶಂಕುಸ್ಥಾಪನೆ ಕಾರ್ಯಕ್ರಮ ಮದೆನಾಡುವಿನಲ್ಲಿ ನಡೆಯಿತು.

ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಹುದಿಕೇರಿ ರಾಜೇಂದ್ರ, ಆಡಳಿತ ಮಂಡಳಿಯ ಪಳಂಗೋಟು ಸುಬ್ಬಯ್ಯ, ಹೊನ್ನಪ್ಪ, ಬಾರಿಕೆ ಜೋಯಪ್ಪ, ರಾಮಣ್ಣ, ಲೋಬಯ್ಯ, ಪ್ರಾಂಶುಪಾಲೆ ತೆಕ್ಕಡೆ ಗುಲಾಬಿ ಜನಾರ್ದನ್ ಸಂಸ್ಥೆಯ ದಾಖಲೆಗಳನ್ನು ಸ್ವಾಮೀಜಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಪ್ರಸನ್ನನಾಥ ಸ್ವಾಮೀಜಿ, ಪುರುಷೋತ್ತಮನಂದನಾಥ ಸ್ವಾಮೀಜಿ, ಪೊನ್ನಂಪೇಟೆ ರಾಮಕೃಷ್ಣಶ್ರಮದ ಬೋಧಸ್ವರೂಪಾನಂದ ಸ್ವಾಮೀಜಿ, ಅರಮೇರಿಯ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಅಮ್ಮತ್ತಿಯ ಕನ್ನಡ ಮಠದ ದೇಶೀ ಚೆನ್ನಕೇಶವ ಸ್ವಾಮೀಜಿ, ಸೊಮೇಶ್ವರನಾಥ ಸ್ವಾಮೀಜಿ, ಶಾಸಕರುಗಳಾದ ಕೆ.ಜಿ. ಬೋಪಯ್ಯ, ವಾಸು ಇನ್ನಿತರರು ಪಾಲ್ಗೊಂಡಿದ್ದರು.

error: Content is protected !!