ರಾಜ್ಯ ಮಟ್ಟದ ಸ್ಪರ್ಧೆ : 9 ಪದಕಗಳನ್ನು ಗೆದ್ದ ಕೊಡಗು ವುಶು ಸಂಸ್ಥೆಯ ವಿದ್ಯಾರ್ಥಿಗಳು

February 8, 2021

ಮಡಿಕೇರಿ ಫೆ.8 : ಬಾಗಲಕೋಟೆಯಲ್ಲಿ ನಡೆದ ರಾಜ್ಯಮಟ್ಟದ ವುಶು ಚಾಂಪಿಯನ್ ಶಿಪ್‍ನಲ್ಲಿ ಕೊಡಗು ಜಿಲ್ಲಾ ವುಶು ಸಂಸ್ಥೆಯ ವಿದ್ಯಾರ್ಥಿಗಳು 1 ಚಿನ್ನ, 4 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಗಳಾದ ಹೆಚ್.ಆರ್.ಬೃಂದಾ ಚಿನ್ನದ ಪದಕ ಗೆದುಕೊಂಡಿದ್ದು, ಬಿ.ಎಸ್.ಸಾತ್ವಿಕಾ, ಪಿ.ಬಿ.ಧನುಷ್ ಕೆ.ಎಸ್.ಶ್ರವಿನ್, ಅದೋಕ್ಷ ಬೆಳ್ಳಿ ಪದಕ, ಎ.ಆಯುಷ್ ಕೃಷ್ಣ, ಪಿ.ಎಸ್.ನಿಖಿಲ್, ಎನ್.ಎಸ್.ಅಜಯ್ ಹಾಗೂ ಪಿ.ಆರ್.ಯಶಸ್ ಕಂಚಿನ ಪಡೆದಿದ್ದಾರೆ.
ರಾಜ್ಯ ತರಬೇತುದಾರ ಎನ್.ಸಿ.ಸುದರ್ಶನ್ ಅವರ ಮಾರ್ಗದರ್ಶನದಲ್ಲಿ ಎಂ.ಸಿ.ಸಿಬಿ ತರಬೇತುದಾರಾಗಿ ಕಾರ್ಯನಿರ್ವಹಿಸಿದರು.

error: Content is protected !!