ಭಾಗಮಂಡಲ ಶ್ರೀಕಾವೇರಿ ವಿದ್ಯಾ ಸಂಘ ಆದಿಚುಂಚನಗಿರಿ ಮಹಾ ಸಂಸ್ಥಾನಕ್ಕೆ ಹಸ್ತಾಂತರ

February 8, 2021

ಮಡಿಕೇರಿ ಫೆ.8 : ಭಾಗಮಂಡಲದ ಶ್ರೀಕಾವೇರಿ ವಿದ್ಯಾ ಸಂಘವನ್ನು ಆದಿ ಚುಂಚನಗಿರಿ ಮಹಾ ಸಂಸ್ಥಾನದ ಸುಪರ್ದಿಗೆ ಒಪ್ಪಿಸಲಾಗಿದೆ. ಗುರುವಂದನೆ ಮತ್ತು ಸಮರ್ಪಣಾ ಸಮಾರಂಭ ಇಂದು ನಡೆಯಿತು.
ಶ್ರೀಡಾ.ನಿರ್ಮಲಾನಂದ ಮಹಾಸ್ವಾಮಿಗಳ ಸಮ್ಮುಖದಲ್ಲಿ ಶ್ರೀಆದಿ ಚುಂಚನಗಿರಿ ಮಠಕ್ಕೆ ವಿದ್ಯಾ ಸಂಘವನ್ನು ಹಸ್ತಾಂತರಿಸುವುದರೊಂದಿಗೆ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಉತ್ತಮ ವಾತಾವರಣವನ್ನು ಕಲ್ಪಿಸಲಾಯಿತು.
ಶ್ರೀಕಾವೇರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರೀಡಾ.ನಿರ್ಮಲಾನಂದ ಮಹಾ ಸ್ವಾಮೀಜಿಗಳು ಸಮರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಶಾಸಕ ಕೊಂಬಾರನ ಜಿ.ಬೋಪಯ್ಯ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾ ಸಂಘದ ಸ್ಥಳ ದಾನಿಗಳಾದ ಚೆದುಕಾರು ಮತ್ತು ಹೊಸಗದ್ದೆ ಕುಟುಂಬದ ಪಟ್ಟೆದಾರರಿಗೆ ಸಮಾರಂಭದಲ್ಲಿ ಗೌರವ ಸಮರ್ಪಣೆ ಮಾಡಲಾಯಿತು. ಅಲ್ಲದೆ, ಗುರುವಂದನಾ ಕಾರ್ಯಕ್ರಮ ಕೂಡ ನಡೆಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

error: Content is protected !!