ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಆರು ಮಂದಿ ಸಾವು, 11 ಜನರಿಗೆ ಗಾಯ

February 9, 2021

ಜೌನ್ ಪುರ: ಎರಡು ವಾಹನಗಳ ನಡುವೆ ಸಂಭವಿಸಿದ ಬೀಕರ ಅಫಘಾತದಲ್ಲಿ ಆರು ಮಂದಿ ಸಾವನ್ನಪ್ಪಿ 11 ಜನ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಜೌನ್ ಪುರ ಜಿಲ್ಲೆಯ ಜಲಾಲ್ ಪುರದಲ್ಲಿ ನಡೆದಿದೆ.

ವಾರಣಾಸಿಯಲ್ಲಿ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ 17 ಮಂದಿ ಜೀಪ್ ನಲ್ಲಿ ವಾಪಸಾಗುತ್ತಿದ್ದರು, ಈ ವೇಳೆ ಅಪಘಾತ ಸಂಭವಿಸಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಮರ್ ಬಹದ್ದೂರ್ ಯಾದವ್, ರಾಮ್ ಶ್ರೀಂಗಾರ್, ಮುನ್ನಿಲಾಲ್, ಕಮಲ ಪ್ರಸಾದ್ ಯಾದವ್, ಇಂದ್ರಜಿತ್ ಯಾದವ್, ರಾಮ್ ಕುಮಾರ್,ಮೃತರು ಎಂದು ಗುರುತಿಸಲಾಗಿದೆ.

ಸಾರೈ ಖ್ವಾಜಾ ಪ್ರದೇಶದ ಜಲಾಲ್‌ಪುರ ಗ್ರಾಮದ ನಿವಾಸಿ 112 ವರ್ಷದ ಧನದೇ ದೇವಿ ಮೃತಪಟ್ಟಿದ್ದು, ಅವರ ಸೊಸೆ ಲಕ್ಷ್ಮಿ ಶಂಕರ್ ಯಾದವ್ ವಾರಣಾಸಿಯ ಮಣಿಕರ್ಣಿಕಾ ಘಾಟ್‌ಗೆ 17 ಮಂದಿ ಜೊತೆ ಅಂತ್ಯಕ್ರಿಯೆಗೆ ತೆರಳಿದ್ದರು.

ಅಪಘಾತ ಪ್ರದೇಶಕ್ಕೆ ಪೊಲೀಸರು ತೆರಳ ಮಾಹಿತಿ ಸಂಗ್ರಹಿಸಿದ್ದಾರೆ. ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

error: Content is protected !!