ದಂತ ವೈದ್ಯಕೀಯ ಶಿಕ್ಷಣದಲ್ಲಿ ಮಡಿಕೇರಿಯ ಡಾ. ತನುಶ್ರೀಗೆ ಚಿನ್ನದ ಪದಕ

February 9, 2021

ಮಡಿಕೇರಿ ಫೆ.9 : ದಂತ ವ್ಯದ್ಯಕೀಯ ಶಿಕ್ಷಣದಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಮಡಿಕೇರಿಯ ಡಾ.ತನುಶ್ರೀ ಜಿ.ಸಿ ಅವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿದ್ಯಾಲಯ (ಆರ್‍ಜಿಯುಹೆಚ್‍ಎಸ್)ಚಿನ್ನದ ಪದಕ ನೀಡಿ ಗೌರವಿಸಿದೆ.
ಬೆಂಗಳೂರಿನ ನಿಮ್ಹಾನ್ಸ್ ಸಮಾವೇಶ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿದ್ಯಾಲಯ ತನ್ನ 23ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಷ್ರ್ಟಪತಿ ರಮಾನಾಥ್ ಕೋವಿಂದ್, ಮುಖ್ಯಮಂತ್ರಿ ಬಿ,ಎಸ್. ಯಡಿಯೂರಪ್ಪ, ಸಚಿವ ಕೆ. ಸುಧಾಕರ್, ಕುಲಪತಿ ಡಾ. ಎಸ್. ಸಚಿದನಂದಾ ಅವರುಗಳ ಉಪಸ್ಥಿತಿಯಲ್ಲಿ ಚಿನ್ನದ ಪದಕ ಪಡೆದವರಿಗೆ ಪದವಿ ಪ್ರಧಾನ ಮಾಡಿದರು.
ಡಾ ತನುಶ್ರಿ ಮೂಲತಃ ಮಡಿಕೇರಿಯ ಗೌಳಿಬೀದಿ ನಿವಾಸಿ ಯಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಕಾರ್ಯವಿರ್ವಹಕ ನಿರ್ದೇಶಕರು ಜಿ.ವಿ. ಚಂದ್ರಕುಮಾರ್ ಹಾಗೂ ಲತಾ ದಂಪತಿಯ ಪುತ್ರಿಯಾಗಿದ್ದು, ಮಂಗಳೂರಿನ ಎ.ಜೆ. ದಂತ ವಿದ್ಯಾಲಯದಲ್ಲಿ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಪದವಿ ಪಡೆದಿದ್ದಾರೆ. 2019ನೇ ಸಾಲಿನ ಪರೀಕ್ಷೆಯಲ್ಲಿ ‘ಒರಲ್ ಮೆಡಿಷನ್ ಆ್ಯಂಡ್ ರೇಡಿಯೋಲಾಜಿ’ ಎಂಬ ವಿಷಯದಲ್ಲಿ ವಿಶ್ವ ವಿದ್ಯಾಲಯದಲ್ಲಿಯೇ ಅತ್ಯಂತ ಹೆಚ್ಚು ಅಂಕಗಳಿಸಿದ ಡಾ. ತನುಶ್ರಿಗೆ ಚಿನ್ನದ ಪದಕ ನೀಡಿ ಗೌರವಿಸಿದೆ.

error: Content is protected !!