ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘದಿಂದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ

February 9, 2021

ಮಡಿಕೇರಿ ಫೆ. 9 : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಕೊಡಗು-ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಅವರನ್ನು ಭೇಟಿ ಮಾಡಿ ಫಲಪುಷ್ಪ ನೀಡಿ ಗೌರವಿಸಲಾಯಿತು.
ಭಾಗಮಂಡಲದಲ್ಲಿ ಕಾರ್ಯಕ್ರಮವೊಂದಕ್ಕೆ ಹಾಜರಾದ ಸಂದರ್ಭ ಭೇಟಿ ನೀಡಿದ ಸಂಘದ ಪ್ರಮುಖರು ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘಕ್ಕೆ ಜಾಗವನ್ನು ಹೊಂದಿಸಿಕೊಡುವಲ್ಲಿ ಸರಕಾರದದೊಂದಿಗೆ ಚರ್ಚಿಸಿ ಸಹಕರಿಸುವಂತೆ ಮನವಿ ಮಾಡಿದರು.
ಸಂಘದ ತಾಲ್ಲೂಕು ಅಧ್ಯಕ್ಷ ವಿ.ಜಿ.ಮೋಹನ್, ಕಾರ್ಯದರ್ಶಿ ಕುಶಾಲಪ್ಪ, ಖಜಾಂಜಿ ಕೆ. ರಮೇಶ್, ಸಂಘಟನಾ ಕಾರ್ಯದರ್ಶಿ ಮಂಜುನಾಥ್, ನಿರ್ದೇಶಕರಾದ ಬಸವರಾಜು, ಉಮೇಶ್ ಕುಮಾರ್, ಮೋಹನ್ ಕುಮಾರ್, ವಿಜಯಕುಮಾರ್, ಶಿವಕುಮಾರ್, ಧನಂಜಯ್ ಹಾಗೂ ಹಿರಿಯ ಸದಸ್ಯ ದೇವೇಂದ್ರ ಹಾಜರಿದ್ದರು.

error: Content is protected !!