ಭಾರತದ ಬೆಳವಣಿಗೆಯನ್ನು ಸ್ವಾಗತಿಸಿದ ಅಮೆರಿಕ

February 10, 2021

ವಾಷಿಂಗ್ಟನ್: ಭಾರತ ಜಾಗತಿಕವಾಗಿ ಪ್ರಬಲ ಶಕ್ತಿಯಾಗಿ ಬಲಗೊಳ್ಳುತ್ತಿದ್ದು, ಭಾರತದ ಈ ಕ್ಷಿಪ್ರ ಬೆಳವಣಿಗೆಯನ್ನು ಸ್ವಾಗತಿಸುವುದಾಗಿ ಅಮೆರಿಕ ಹೇಳಿದೆ.

ಇಂಡೋ ಪೆಸಿಫಿಕ್ ಭಾಗದಲ್ಲಿ ಭಾರತವನ್ನು ಅತ್ಯಂತ ಪ್ರಮುಖ ಪಾಲುದಾರ ರಾಷ್ಟ್ರವನ್ನಾಗಿ ಪರಿಗಣಿಸುವುದಾಗಿ ಹೇಳಿರುವ ಅಮೆರಿಕ, ಉಭಯ ದೇಶಗಳ ನಡುವಿನ ಸಾಮರಿಕ ಸಂಬಂಧ ಜಾಗತಿಕ ಪರಿಣಾಮಗಳನ್ನು ಉಂಟು ಮಾಡುತ್ತಿರುವುದನ್ನು ಸ್ಪಷ್ಟವಾಗಿ ನೀಡಬಹುದಾಗಿದೆ ಎಂದು ಹೇಳಿದೆ.

ಈ ಕುರಿತು ಮಾತನಾಡಿರುವ ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ನೆಡ್ ಪ್ರೈಸ್, ಭಾರತ ಜಾಗತಿಕ ಪ್ರಬಲ ಶಕ್ತಿಯಾಗಿ ಬಲಗೊಳ್ಳುತ್ತಿರುವುದು ಅದರ ಮಿತ್ರ ರಾಷ್ಟ್ರವಾದ ಅಮೆರಿಕಕ್ಕೆ ಸಹಜವಾಗಿ ಸಂತಸವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಜೊತೆ ಅಧ್ಯಕ್ಷ ಬಿಡೆನ್‌ ಫೋನ್‌ ಸಂಭಾಷಣೆ:‌ ಭಯೋತ್ಪಾದನೆ ಮಟ್ಟ ಹಾಕಲು ಪಣ!

ಇಂಡೋ-ಪೆಸಿಫಿಕ್ ಭಾಗದಲ್ಲಿ ಪ್ರಾದೇಶಿಕ ಸಹಕಾರ, ಭಯೋತ್ಪಾದನೆ ನಿಗ್ರಹ, ಆರೋಗ್ಯ, ಶಿಕ್ಷಣ, ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಜಂಟಿ ಪ್ರಯತ್ನಗಳು ನಡೆಯುತ್ತಿದ್ದು, ಇದು ಅಮೆರಿಕ ಹಾಗೂ ಭಾರತವನ್ನು ರಾಜತಾಂತ್ರಿಕವಾಗಿ ಮತ್ತಷ್ಟು ಹತ್ತಿರಕ್ಕೆ ತಂದಿದೆ ಎಂದು ಪ್ರೈಸ್ ನುಡಿದಿದ್ದಾರೆ.

ಇಷ್ಟು ಮಾತ್ರವಲ್ಲದೇ ಭಾರತ-ಅಮೆರಿಕ ನಡುವಿನ ವಾಣಿಜ್ಯ ಸಂಬಂಧ ಕೂಡ ಹೆಚ್ಚು ಸದೃಢವಾಗಿದ್ದು, ವಾಣಿಜ್ಯ ಕ್ಷೇತ್ರದಲ್ಲಿ ಅಮೆರಿಕ ಭಾರತದ ಅತ್ಯಂತ ದೊಡ್ಡ ಪಾಲುದಾರ ರಾಷ್ಟ್ರವಾಗಿ ಉಳಿದುಕೊಂಡಿದೆ ಎಂದು ಪ್ರೈಸ್ ಸಂತಸ ವ್ಯಕ್ತಪಡಿಸಿದರು.

2019ರಲ್ಲಿ ಭಾರತ-ಾಮೆರಿಕ ನಡುವೆ 146 ಬಿಲಿಯನ್ ಅಮೆರಿಕನ್ ಡಾಲರ್ ವ್ಯಾಪಾರ ನಡೆದಿದ್ದು, ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದು ಉಭಯ ದೇಶಗಳ ನಡುವಿನ ಗಟ್ಟಿ ವಾಣಿಜ್ಯ ಸಂಬಂಧಕ್ಕೆ ಸಾಕ್ಷಿ ಎಂದು ಪ್ರೈಸ್ ಹೇಳಿದರು.

error: Content is protected !!