ಬೆದರಿಕೆ ಕರೆಗಳಿಂದ ಹೆದರಿಸಲು ಸಾಧ್ಯವಿಲ್ಲ : ಶಾಸಕ ಪ್ರಿಯಾಂಕ್‌ ಖರ್ಗೆ

February 10, 2021

ಕಲಬುರಗಿ: ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ, ಹಾಲಿ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಹಾಕುವ ಮೂಲಕ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ಇಂತಹ ಬೆದರಿಕೆ ಕರೆಗಳು ನಮ್ಮ ವಿಚಾರಗಳನ್ನು ವಿಚಲಿತಗೊಳಿಸುವುದಿಲ್ಲ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಖಡಕ್‌ ಉತ್ತರ ನೀಡಿದ್ದಾರೆ.

ಟ್ವಿಟ್ಟರ್‌ ಮೂಲಕ, ರಾಜಕಾರಣದಲ್ಲಿನ ವಿಛ್ಛಿದ್ರಕಾರಕ ಶಕ್ತಿಗಳಿಗೆ ದಿಟ್ಟ ಉತ್ತರ ನೀಡಿರುವ ಅವರು, ನಾವು ಈಗಲೂ ಸತ್ಯ ಹೇಳುವುದನ್ನು ಯಾರಿಂದಲೂ ತಡೆಯಲು ಆಗುವುದಿಲ್ಲ. ಇಂತಹ ಕರೆಗಳಿಂದ, ಬೆದರಿಕೆಗಳಿಂದ ನಮ್ಮ ವಿಚಾರ ಇನ್ನಷ್ಟು ಗಟ್ಟಿಯಾಗುತ್ತವೆ. ಮೌಲ್ಯ ಇನ್ನಷ್ಟು ತೀಕ್ಷಣಗೊಳ್ಳುತ್ತದೆ ಎನ್ನುವುದನ್ನು ವಿರೋಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದ ಅವರು ಟ್ವೀಟ್‌ ಮಾಡಿದ್ದಾರೆ.

error: Content is protected !!