ರಾಮ ಮಂದಿರ ನಿರ್ಮಾಣಕ್ಕೆ 51 ಲಕ್ಷ ದೇಣಿಗೆ ನೀಡಿದ ಕಾಂಗ್ರೆಸ್‌ನ ಯುವ ಶಾಸಕಿ ರಾಯ್ ಬರೇಲಿಯ

February 10, 2021

ಹೊಸದಿಲ್ಲಿ: ಶ್ರೀರಾಮ ಚಂದ್ರನ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಸದ್ಯ ದೇಣಿಗೆ ಸಂಗ್ರಹ ನಡೆಯುತ್ತಿದೆ. ದೇಶದ ಜನರು ರಾಮ ಮಂದಿರ ನಿರ್ಮಾಣಕ್ಕೆ ಭಾರೀ ರೀತಿಯಲ್ಲಿ ಸ್ಪಂದನೆ ನೀಡುತ್ತಿದ್ದಾರೆ. ರಾಮ ಮಂದಿರದ ಟ್ರಸ್ಟ್‌ ಮೂಲಗಳ ಪ್ರಕಾರ, ಈಗಾಗಲೇ ಸಾವಿರ ಕೋಟಿ ದೇಣಿಗೆ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ. ಜನ ಸಾಮಾನ್ಯರ ಜೊತೆಗೆ ಗಣ್ಯರು ಕೂಡ ಭಾರೀ ಮೊತ್ತವನ್ನು ಮಂದಿರ ನಿರ್ಮಾಣಕ್ಕೆ ನೀಡುತ್ತಿದ್ದಾರೆ.

ಇದೀಗ ಉತ್ತರ ಪ್ರದೇಶದ ರಾಯ್ ಬರೇಲಿ ಕಾಂಗ್ರೆಸ್ ಶಾಸಕಿ ಆದಿತಿ ಸಿಂಗ್ ರಾಮ ಮಂದಿರ ನಿರ್ಮಾಣಕ್ಕೆ ಭಾರೀ ಮೊತ್ತವನ್ನು ನೀಡಿದ್ದಾರೆ. 51 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಚಂಪತ್‌ ರಾಜ್‌ ಅವರಿಗೆ 51 ಲಕ್ಷ ಮೊತ್ತವನ್ನು ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ದೇಣಿಗೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.

error: Content is protected !!