ಹಂಪಿ ಆಟೋಕ್ರಾಸ್ ನಲ್ಲಿ ಕೊಡಗಿನ ರ‍್ಯಾಲಿ ಪಟು ಅಭಿನ್ ರೈ ಸಾಧನೆ

February 10, 2021

ಮಡಿಕೇರಿ ಫೆ.10 : ಕೊಡಗು ಮೂಲದ ಯುವ ರ್ಯಾಲಿ ಪಟು ಅಭಿನ್ ರೈ ಹಂಪಿಯಲ್ಲಿ ಆಯೋಜಿತ ರಾಷ್ಟ್ರೀಯ ಆಟೋ ಕ್ರಾಸ್ ದಿ ಹಂಪಿ ನಲ್ಲಿ ಸಾಧನೆ ತೋರಿದ್ದಾರೆ.
ಹಂಪಿಯಲ್ಲಿ ಆಯೋಜಿತ ರಾಷ್ಟ್ರಮಟ್ಟದ ಇಂಡಿಯನ್ ನ್ಯಾಷನಲ್ ಆಟೋಕ್ರಾಸ್ ಚಾಂಪಿಯನ್ ಶಿಪ್ ನಲ್ಲಿ ಅಭಿನ್ ರೈ ಫಸ್ಟ್ ರನ್ನರ್ ಅಪ್ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ.
ಅಭಿನ್ ರೈ ಮೂಲತ ಮೇಕೇರಿಯ ರತ್ನಾಕರ್ ರೈ, ನಮಿತಾ ರೈ ದಂಪತಿ ಪುತ್ರನಾಗಿದ್ದು, ಈಗಾಗಲೇ ರಾಜ್ಯದಲ್ಲಿನ ಅನೇಕ ಮೋಟಾರ್ ರ್ಯಾಲಿಯಲ್ಲಿ ಪಾಲ್ಗೊಂಡು ಸಾಧನೆ ತೋರಿದ್ದಾರೆ.

error: Content is protected !!