ಗೌಡಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಕೆ.ಕೆ.ಸುಮ, ಉಪಾಧ್ಯಕ್ಷರಾಗಿ ಕೆ.ಎಂ.ರೋಹಿಣಿ ಆಯ್ಕೆ

February 10, 2021

ಸೋಮವಾರಪೇಟೆ ಫೆ. 10 : ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಕೆ.ಕೆ.ಸುಮ, ಉಪಾಧ್ಯಕ್ಷರಾಗಿ ಕೆ.ಎಂ.ರೋಹಿಣಿ ಅವಿರೋಧ ಆಯ್ಕೆಯಾಗಿದ್ದಾರೆ.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಹೇಮಂತ್ ಕುಮಾರ್ ಚುನಾವಣಾಧಿಕಾರಿಯಾಗಿ ಪ್ರಕ್ರಿಯೆ ನಡೆಸಿ, 1 ಗಂಟೆಗೆ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಪಂಚಾಯಿತಿಯ 10 ಸ್ಥಾನಗಳ ಪೈಕಿ 9ರಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದು, ಜೆಡಿಎಸ್ ಬೆಂಬಲಿತ ಓರ್ವರು ಸದಸ್ಯರಾಗಿದ್ದಾರೆ. ಆಯ್ಕೆ ಪ್ರಕ್ರಿಯೆ ಸಂದರ್ಭ ಸದಸ್ಯರಾದ ಜಿ.ಎನ್.ನಾಗರಾಜ್, ಎ.ಎಸ್.ನವೀನ್‍ಕುಮಾರ್, ಬಿ.ಎಚ್.ಮಂಜುನಾಥ್, ಜಿ.ಜಿ.ಗಣೇಶ್, ಸಿ.ಈ.ವೆಂಕಟೇಶ್, ಗೌರಿ, ಕೆ.ಡಿ.ವಿಶಾಲಾಕ್ಷಿ, ಜಿ.ಜಿ.ಮಲ್ಲಿಕಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಖಿತ ಇದ್ದರು.
ಬಿಜೆಪಿ ಪ್ರಮುಖರಾದ ಜಿ.ಪಿ.ಸುನೀಲ್, ಭರತ್‍ಕುಮಾರ್, ಎಚ್.ಎಂ.ಜಿತೇಂದ್ರ, ನಾಗರಾಜ್, ವಿಠಲ್ ಅವರುಗಳು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

error: Content is protected !!